ಚಂದ್ರಯಾನ-2 ವಿಫಲವಾಗಬಹುದು ಎಂದು ಕೆಲವರು ನನಗೆ ಹೇಳಿದ್ದರು: ಪ್ರಧಾನಿ ಮೋದಿ

Update: 2020-01-20 13:52 GMT

ಹೊಸದಿಲ್ಲಿ: ಜೀವನದಲ್ಲಿ ಯಶಸ್ವಿಯಾಗಬೇಕಾದರೆ ವೈಫಲ್ಯದಿಂದ ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಪೇ ಚರ್ಚಾ 3ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು, ಕಳೆದ ವರ್ಷದ ಚಂದ್ರಯಾನ-2ರ ಬಗ್ಗೆ ಮಾತನಾಡಿದರು.

"ಚಂದ್ರಯಾನದ ಯಶಸ್ಸಿನ ಬಗ್ಗೆ ಖಾತರಿ ಇಲ್ಲ ಎಂಬ ಕಾರಣಕ್ಕೆ ಚಂದ್ರಯಾನ ಮಿಷನ್ ಉಡಾವಣೆಗೆ ತೆರಳದಂತೆ ಕೆಲವರು ನನಗೆ ಸಲಹೆ ಮಾಡಿದ್ದರು. ಅದು ವಿಫಲವಾದರೆ ಏನಾಗಬಹುದು? ಎಂದು ಹೇಳಿದ್ದರು. ನಾನು ಅಲ್ಲಿಗೆ ಏಕೆ ಹೋಗಬೇಕು ಎನ್ನುವುದನ್ನು ಅವರಿಗೆ ನಿಖರವಾಗಿ ತಿಳಿಸಿದೆ. ಚಂದ್ರಯಾನ-2 ವೈಫಲ್ಯದಿಂದ ಬೇಸರವಾದರೂ, ನಾನು ವಿಜ್ಞಾನಿಗಳ ಜತೆ ಮಾತನಾಡಿ ಅವರಿಗೆ ಸ್ಫೂರ್ತಿ ತುಂಬಿದೆ. ನನ್ನ ಭಾವನೆಗಳನ್ನು ವಿವರಿಸಿ, ಅವರ ಕಠಿಣ ಪರಿಶ್ರಮಕ್ಕೆ ಹೊಗಳಿದೆ ಮತ್ತು ದೇಶದ ಕನಸಿನ ಬಗ್ಗೆ ವಿವರಿಸಿದೆ. ಅವರ ಭಾವನೆಗಳು ಬದಲಾದವು; ಅಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಈ ಬದಲಾವಣೆ ಆಯಿತು" ಎಂದು ಮೋದಿ ವಿವರಿಸಿದರು.

ಆ ಬಳಿಕ ಏನಾಯಿತು ಎನ್ನುವುದು ನಿಮಗೆಲ್ಲ ಗೊತ್ತು; ಕೆಲವೊಮ್ಮೆ ನೀವು ವೈಫಲ್ಯಗಳಿಂದ ಕಲಿಯಬಹುದು ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News