‘ಅಟ್ಲಾಸ್’ ಸೈಕಲ್ ಕಂಪೆನಿ ಮಾಲಕ ಸಂಜಯ್ ಪತ್ನಿ ಆತ್ಮಹತ್ಯೆಗೆ ಶರಣು

Update: 2020-01-22 17:58 GMT

ಹೊಸದಿಲ್ಲಿ, ಜ. 22: ‘ಅಟ್ಲಾಸ್’ ಸೈಕಲ್ ಕಂಪೆನಿ ಮಾಲಕನ ಪತ್ನಿ ನಟಾಶ್ ಕಪೂರ್ (57) ಹೊಸದಿಲ್ಲಿಯ ಔರಂಗಜೇಬ್ ಲೇನ್ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ಮಂಗಳವಾರ ಫ್ಯಾನ್‌ಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

 ನಟಾಶ್ ಕಪೂರ್ ಅವರ ಮರಣೋತ್ತರ ಪರೀಕ್ಷೆಯನ್ನು ಗಂಗಾರಾಮ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ಅನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ನಟಾಶ್ ಕಪೂರ್ ಅವರ ಸುಸೈಡ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ತನ್ನ ಮಕ್ಕಳನ್ನು ನೋಡಿಕೊಳ್ಳುವಂತೆ ಕುಟಂಬದವರಲ್ಲಿ ಮನವಿ ಮಾಡಿದ್ದಾರೆ.

ನಟಾಶ್ ಕಪೂರ್ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಮನೆಯಲ್ಲಿ ಅವರ ಪುತ್ರ ಹಾಗೂ ಪುತ್ರಿ ಇದ್ದರು. ಆದರೆ, ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅವರ ಅರಿವಿಗೆ ಬಂದಿಲ್ಲ. 70 ದಶಕಗಳ ಇತಿಹಾಸ ಇರುವ ಅಟ್ಲಾಸ್ ಸೈಕಲ್ ಕಂಪೆನಿಯ ಮಾಲಕ ಸಂಜಯ್ ಕಪೂರ್ ಅವರ ಪತ್ನಿ ನಟಾಶ್ ಕಪೂರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಸಂಜಯ್ ಕಪೂರ್ ಮನೆಯಲ್ಲಿ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News