ಭಾರತ ‘ಎ’ ತಂಡದಿಂದ ಖಲೀಲ್ ಅಹ್ಮದ್ ಔಟ್

Update: 2020-01-25 17:16 GMT

ಕ್ರೈಸ್ಟ್‌ಚರ್ಚ್, ಜ.25: ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಈಗ ನಡೆಯುತ್ತಿರುವ ನ್ಯೂಝಿಲ್ಯಾಂಡ್ ಪ್ರವಾಸದಲ್ಲಿ ಭಾರತ ‘ಎ’ ತಂಡದಿಂದ ಹೊರಗುಳಿದಿದ್ದಾರೆ. ಖಲೀಲ್ ಮಣಿಕಟ್ಟು ನೋವಿನಿಂದ ಬಳಲುತ್ತಿದ್ದಾರೆ.

‘‘ಜನವರಿ 22ರಂದು ಲಿಂಕೊಲಿನ್‌ನಲ್ಲಿ ನಡೆದ ನ್ಯೂಝಿಲ್ಯಾಂಡ್ ‘ಎ’ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಖಲೀಲ್ ಅಹ್ಮದ್‌ರ ಎಡ ಮಣಿಕಟ್ಟಿನ ಮೂಳೆ ಬಿರುಕುಬಿಟ್ಟಿತ್ತು. ಅವರ ಕೈಗೆ ಪ್ಲಾಸ್ಟರ್ ಹಾಕಲಾಗಿದ್ದು, ಎಡಗೈ ವೇಗದ ಬೌಲರ್ ಭಾರತ ‘ಎ’ ತಂಡ ಆಡಲಿರುವ ಉಳಿದ ಪಂದ್ಯಗಳಲ್ಲಿ ಲಭ್ಯವಿರುವುದಿಲ್ಲ’’ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಬಿಸಿಸಿಐ ಈ ತನಕ ವೇಗದ ಬೌಲರ್ ಖಲೀಲ್ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ.

ಖಲೀಲ್ ಭಾರತದ ಪರ 11 ಏಕದಿನ ಹಾಗೂ 14 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ನ್ಯೂಝಿಲ್ಯಾಂಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯಗಳಲ್ಲಿ 8 ಓವರ್‌ಗಳಲ್ಲಿ 46 ರನ್‌ಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಖಲೀಲ್ 9.1 ಓವರ್‌ಗಳಲ್ಲಿ 43 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News