×
Ad

ಮಾರ್ಚ್ ನೊಳಗೆ ಎನ್ ಪಿಆರ್ ಹಿಂದೆಗೆದುಕೊಳ್ಳಿ, ಇಲ್ಲದಿದ್ದರೆ...: ಪ್ರಧಾನಿಗೆ ಕಣ್ಣನ್ ಗೋಪಿನಾಥನ್ ಸಂದೇಶ

Update: 2020-02-07 19:22 IST

ಹೊಸದಿಲ್ಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಥವಾ ಎನ್ ಪಿಆರ್ ಹಿಂದೆಗೆದುಕೊಳ್ಳಲು ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಪ್ರಧಾನಿ ಮೋದಿಯವರಿಗೆ ಕೊನೆಯ ದಿನಾಂಕವನ್ನು ನೀಡಿದ್ದಾರೆ. ಇದೇ ಸಂದರ್ಭ ಅವರು ಟ್ವೀಟ್ ಮೂಲಕ 'ದಿಲ್ಲಿ ಚಲೋ' ಪಾದಯಾತ್ರೆಗೆ ಕರೆ ನೀಡಿದ್ದಾರೆ.

"ಪ್ರೀತಿಯ ಪ್ರಧಾನಿ ಮೋದಿಯವರೇ ಈ  ಎನ್ ಪಿಆರ್ ಹಿಂದೆಗೆದುಕೊಳ್ಳಲು ನಿಮಗೆ ಮಾರ್ಚ್ ವರೆಗೆ ಸಮಯವಿದೆ. ಆನಂತರ ಎಲ್ಲಾ ರಾಜ್ಯಗಳ ಜನರು ದಿಲ್ಲಿಗೆ ಬರಲಿದ್ದಾರೆ ಮತ್ತು ಅದನ್ನು ಹಿಂದೆಗೆದುಕೊಳ್ಳುವವರೆಗೆ ದಿಲ್ಲಿಯಲ್ಲೇ ಉಳಿಯಲಿದ್ದಾರೆ. ನಮಗೆ ಬೇರೆ ಆಯ್ಕೆಯಿಲ್ಲ" ಎಂದು ಕಣ್ಣನ್ ಗೋಪಿನಾಥನ್ ಟ್ವೀಟ್ ಮಾಡಿದ್ದಾರೆ.

ಸರಕಾರವು ಇದುವರೆಗೆ ಎನ್ ಆರ್ ಸಿ ವಿಧಾನದ ಬಗ್ಗೆ ನಿರ್ಧರಿಸಿಲ್ಲದ ಕಾರಣ ಎನ್ ಪಿಆರ್ ನ ಅಗತ್ಯವೇನು ಎಂದು ಗೋಪಿನಾಥನ್ ತಮ್ಮ ಟ್ವೀಟನ್ನು ವಿವರಿಸಿದ್ದಾರೆ.

"ನರೇಂದ್ರ ಮೋದಿಯವರೇ ನಾವು ಈ ಬೇಡಿಕೆ ಇಡುವುದಕ್ಕೆ ಕಾರಣವಿದೆ. ಏಕೆಂದರೆ ಎನ್ ಪಿಆರ್- ಎನ್ ಆರ್ ಸಿಯ ಮೊದಲ ಹೆಜ್ಜೆ ಎಂದು ನಿಮ್ಮ ಸರಕಾರ ಹೇಳುತ್ತಿದೆ. ಎನ್ ಆರ್ ಸಿ ವಿಧಾನದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದೂ ನೀವೇ ಹೇಳುತ್ತಿದ್ದೀರಿ. ನೀವಿನ್ನೂ ಎನ್ ಆರ್ ಸಿ ಬಗ್ಗೆ ಆಲೋಚಿಸಿಲ್ಲವಾದರೆ ಎನ್ ಪಿಆರ್ ಏಕೆ? ಎನ್ ಆರ್ ಸಿ ಬಗ್ಗೆ ಸ್ಪಷ್ಟತೆಯಾಗುವವರೆಗೆ ಎನ್ ಪಿಆರ್ ನ್ನು ನಿಲ್ಲಿಸಿ" ಎಂದವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News