ದಿಲ್ಲಿ ಚುನಾವಣೆ: ಆಪ್ ನಿಂದ ಸ್ಪರ್ಧಿಸಿದ್ದ ಐವರು ಮುಸ್ಲಿಂ ಅಭ್ಯರ್ಥಿಗಳ ಜಯಭೇರಿ

Update: 2020-02-11 18:34 GMT

ಹೊಸದಿಲ್ಲಿ, ಫೆ.11: ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಐವರು ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಿದ್ದು, ವಿವರ ಹೀಗಿದೆ.

 ಓಕ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಮಾನತುಲ್ಲಾ ಖಾನ್ ಬಿಜೆಪಿ ಯ ಬ್ರಹ್ಮ ಸಿಂಗ್‌ರನ್ನು 72,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಪೌರತ್ವ ಕಾಯ್ದೆ ವಿರೋಧಿ ಹೋರಾಟದಿಂದ ದೇಶದ ಗಮನ ಸೆಳೆದಿರುವ ಶಾಹೀನ್‌ಬಾಗ್ ಮತ್ತು ಜಾಮಿಯಾ ನಗರಗಳು ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತವೆ. ಕೇಂದ್ರ ದಿಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾತಿಯ ಮಹಲ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಶುಐಬ್ ಇಕ್ಬಾಲ್ 50,241 ಮತಗಳ ಅಂತರದಿಂದ ಬಿಜೆಪಿಯ ರವೀಂದರ್ ಗುಪ್ತಾರನ್ನು ಸೋಲಿಸಿದ್ದಾರೆ.

  ಕೇಂದ್ರ ದಿಲ್ಲಿಯ ಬಲ್ಲಿಮರಾನ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಇಮ್ರಾನ್ ಹುಸೈನ್ ಬಿಜೆಪಿಯ ಲಾಲಾ ಸೋಧಿ ಎದುರು 36,172 ಮತಗಳ ಅಂತರದಿಂದ ಗೆದ್ದಿದ್ದಾರೆ. ಸೀಲಾಂಪುರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಬ್ದುಲ್ ರಹ್ಮಾನ್ ಗೆಲುವು ದಾಖಲಿಸಿದ್ದಾರೆ. ಮುಸ್ತಫಾಬಾದ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಹಾಜಿ ಯೂನಸ್ ಬಿಜೆಪಿಯ ಜಗದೀಶ್ ಪ್ರಧಾನ್‌ರನ್ನು ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News