ಇಶಾಂತ್ ಶರ್ಮಾಗೆ ಗಾಯದ ಸಮಸ್ಯೆ : 2ನೇ ಟೆಸ್ಟ್‌ ಗೆ ಡೌಟ್

Update: 2020-02-28 17:58 GMT

ಕ್ರೈಸ್ಟ್‌ಚರ್ಚ್, ಫೆ.28: ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಬಲಗಾಲಿನ ಗಾಯದಿಂದಾಗಿಶುಕ್ರವಾರ ಟೀಮ್ ಇಂಡಿಯಾದ ನೆಟ್ ಪ್ರಾಕ್ಟೀಸ್‌ನಿಂದ ದೂರ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇಶಾಂತ್ ಶನಿವಾರ ಆರಂಭವಾಗಲಿರುವ ನ್ಯೂಝಿಲ್ಯಾಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ.

 ಇಶಾಂತ್ ಪ್ರಾಕ್ಟೀಸ್ ನಡೆಸಲು ಬಂದಿದ್ದರು. ಆದರೆ, ಮುಂಜಾಗ್ರತಾ ಕ್ರಮವಾಗಿ ಬಲಪಾದದ ಸ್ಕಾನಿಂಗ್‌ಗೆ ಒಳಗಾದರು. ಸ್ಕಾನಿಂಗ್ ವರದಿಗಾಗಿ ಕಾಯಲಾಗುತ್ತಿದೆ. ಒಂದು ವೇಳೆ ಇಶಾಂತ್ ಅನ್‌ಫಿಟ್ ಆದರೆ, ಉಮೇಶ್ ಯಾದವ್ ಅಥವಾ ನವದೀಪ ಸೈನಿ ಅವರು ಇಶಾಂತ್‌ರಿಂದ ತೆರವಾದ ಸ್ಥಾನ ತುಂಬಲಿದ್ದಾರೆ. 45 ಟೆಸ್ಟ್ ಪಂದ್ಯಗಳಲ್ಲಿ ಆಡಿದ ಅನುಭವವಿರುವ ಉಮೇಶ್ ಅವರು 2ನೇ ಟೆಸ್ಟ್ ನಲ್ಲಿ ಆಡುವ ಅವಕಾಶ ಪಡೆಯುವ ಸಾಧ್ಯತೆ ಅಧಿಕವಿದೆ. ನ್ಯೂಝಿಲ್ಯಾಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್‌ಗಳ ಪೈಕಿ ಇಶಾಂತ್ ಶ್ರೇಷ್ಠ ಬೌಲಿಂಗ್ ಮಾಡಿದ್ದರು. 22.2 ಓವರ್‌ಗಳಲ್ಲಿ 68 ರನ್‌ಗೆ 5 ವಿಕೆಟ್ ಗೊಂಚಲು ಪಡೆದಿದ್ದರು. ವಿದರ್ಭ ವಿರುದ್ಧ ರಣಜಿ ಟ್ರೋಫಿ ಪಂದ್ಯದ ವೇಳೆ ಬಲಗಾಲಿನ ಗಾಯಕ್ಕೀಡಾಗಿದ್ದ ಇಶಾಂತ್ ಆ ನಂತರ ಗಾಯದಿಂದ ಬೇಗನೇ ಚೇತರಿಸಿಕೊಂಡು ನ್ಯೂಝಿಲ್ಯಾಂಡ್ ಸರಣಿಗೆ ತಂಡವನ್ನು ಸೇರಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News