ಐಪಿಎಲ್ ಟೂರ್ನಿ ಈಗ ಬೇಕೇ?

Update: 2020-03-09 18:04 GMT

ಮಾನ್ಯರೇ,

ಕೊರೋನ ವೈರಸ್ ಸೋಂಕು ವಿಶ್ವಾದ್ಯಂತ ವೇಗವಾಗಿ ಹಬ್ಬುತ್ತಿದ್ದು ವಿಶ್ವದ ಬಹುತೇಕ ರಾಷ್ಟ್ರಗಳು ಈಗಾಗಲೇ ಈ ವೈರಸ್‌ನಿಂದ ಬಳಲಿವೆ. ಹಾಗಾಗಿ ವಿಶ್ವಾದ್ಯಂತ ಮಹತ್ವದ ಕ್ರೀಡಾಕೂಟಗಳು ಒಂದೋ ರದ್ದಾಗುತ್ತಿವೆ ಅಥವಾ ಮುಂದೂಡಲಾಗುತ್ತಿವೆ. ಆದರೆ ನಮ್ಮ ದೇಶದಲ್ಲಿ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗುಲಿಯವರು ಪೂರ್ವನಿಗದಿಯಂತೆ ಐಪಿಎಲ್ ಟೂರ್ನಿ ನಡೆಸಿಯೇ ತೀರುತ್ತೇವೆ ಎಂಬ ಹಠಮಾರಿ ಧೋರಣೆ ತಾಳಿದ್ದಾರೆ.
ಬೇರೆಬೇರೆ ದೇಶಗಳಿಂದ ಬರುವ ಕ್ರಿಕೆಟ್ ಆಟಗಾರರು ಹಾಗೂ ಕ್ರೀಡಾಭಿಮಾನಿಗಳಿಂದಲೂ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಕ್ರೀಡಾಂಗಣದಲ್ಲಿ ಸುಮಾರು 40ರಿಂದ 50 ಸಾವಿರ ಕ್ರೀಡಾಭಿಮಾನಿಗಳು ಸೇರುವುದರಿಂದ ಸೋಂಕು ಒಬ್ಬರಿಂದೊಬ್ಬರಿಗೆ ಸುಲಭವಾಗಿ ಹರಡಬಹುದು. ಈ ಮೂಲಕ ನಾವಾಗಿಯೇ ನಮ್ಮ ದೇಶವನ್ನು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಐಪಿಎಲ್ ಆಟಕ್ಕೆ ಇದು ಸೂಕ್ತ ಸಮಯವಲ್ಲ.
ಅತ್ತ ಸರಕಾರಗಳು ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವಾಗ ಇತ್ತ ಐಪಿಎಲ್ ಟೂರ್ನಿ ನಡೆಸುವುದು ಎಷ್ಟು ಸಮಂಜಸ.?
  ಈ ಮೂಲಕ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಆದೇಶಿಸುವುದು ಉತ್ತಮ, ಇಲ್ಲದೆ ಹೋದರೆ ಇಡೀ ದೇಶಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಮತ್ತು ಮುಂದಿನ ಪರಿಣಾಮವನ್ನು ಎದುರಿಸಲು ಸಜ್ಜಾಗಬೇಕಾಗಿದೆ.
 

Writer - -ಮುರುಗೇಶ ಡಿ. ದಾವಣಗೆರೆ

contributor

Editor - -ಮುರುಗೇಶ ಡಿ. ದಾವಣಗೆರೆ

contributor

Similar News