'ನಿಮ್ಮ ಕ್ರಮ ಬೆಂಬಲಿಸುವ ಯಾವುದೇ ಕಾನೂನು ಇಲ್ಲ': ಆದಿತ್ಯನಾಥ್ ಸರಕಾರಕ್ಕೆ ಸುಪ್ರೀಂ ಚಾಟಿ

Update: 2020-03-12 07:24 GMT

ಹೊಸದಿಲ್ಲಿ: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವರ ಹೆಸರು, ಫೋಟೋ ಹಾಗೂ ವಿಳಾಸಗಳನ್ನೊಳಗೊಂಡ ಪೋಸ್ಟರುಗಳನ್ನು ಹಾಕುವುದನ್ನು ಬೆಂಬಲಿಸುವ ಯಾವುದೇ ಕಾನೂನು ಇಲ್ಲ ಎಂದು ಸುಪ್ರೀಂ ಕೋಟ್ ಬುಧವಾರ ಹೇಳಿದೆ.

ಲಕ್ನೋದಲ್ಲಿ ಪ್ರತಿಭಟನಕಾರರ ಹೆಸರು ಹಾಗೂ ಫೋಟೋಗಳನ್ನೊಳಗೊಂಡಿರುವ ಪೋಸ್ಟರ್ ಗಳನ್ನು ತೆಗೆದುಹಾಕುವಂತೆ ಅಲಹಾಬಾದ್ ಹೈಕೋರ್ಟಿನ ಆದೇಶದ ವಿರುದ್ಧ ಉತ್ತರ ಪ್ರದೇಶ ಸರಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ  ಇಬ್ಬರು ನ್ಯಾಯಾಧೀಶರ ರಜಾಕಾಲದ ಪೀಠ ಮೇಲಿನಂತೆ ಹೇಳಿದೆ. ಅಲಹಾಬಾದ್ ಹೈಕೋರ್ಟಿನ ಆದೇಶಕ್ಕೆ ತಡೆ ಹೇರಲು ನಿರಾಕರಿಸಿದೆ. ಅದೇ ಸಮಯ ಪ್ರಕರಣವನ್ನು ತ್ರಿಸದಸ್ಯರ ಸಾಮಾನ್ಯ ಪೀಠಕ್ಕೆ ವಹಿಸಲಾಗಿದೆ.

ಉತ್ತರ ಪ್ರದೇಶ ಸರಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಂಬಂಧಿತ ಪ್ರಾಧಿಕಾರವು 95 ಮಂದಿಯನ್ನು ವಿಚಾರಣೆ ನಡೆಸಿತ್ತು. 57 ಮಂದಿ ಹಿಂಸೆಗೆ ಕಾರಣರಾಗಿದ್ದಾರೆ, ಈ ಮಂದಿ ವಿವಿಧ ಸಮುದಾಯಗಳಿಗೆ ಸೇರಿದವರಾಗಿದ್ದಾರೆ'' ಎಂದು ಹೇಳಿದರು.

ಹೋರಾಟಗಾರ ದಾರಾಪುರಿ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಯಾವಾಗಿನಿಂದ ಆರೋಪಿಗಳನ್ನು ಈ ರೀತಿ ಅವಮಾನಿಸಲು ಅನುಮತಿಸಲಾಗಿದೆ ಎಂದು ಪ್ರಶ್ನಿಸಿದರು. ಇಂತಹ ಪೋಸ್ಟರುಗಳಲ್ಲಿ ಕಾಣಿಸಿಕೊಂಡವರ ಮೇಲೆ ದಾಳಿ ನಡೆಸಲು ಜನರನ್ನು ಪ್ರಚೋದಿಸುವುದು ಇಂತಹ ಕೃತ್ಯದ ಉದ್ದೇಶ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News