×
Ad

ಕೊರೋನ ವೈರಸ್ ಮುನ್ನೆಚ್ಚರಿಕೆ: ಜೆರುಸಲೇಮ್‌ನ ಅಲ್-ಅಕ್ಸಾ ಮಸೀದಿ ಬಂದ್

Update: 2020-03-15 20:51 IST
Photo: twitter.com/alaqsa_mosque/photo

ಜೆರುಸಲೇಮ್, ಮಾ. 15: ಕೊರೋನವೈರಸ್ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯಾಗಿ ಜೆರುಸಲೇಮ್‌ನ ಅಲ್-ಅಕ್ಸಾ ಮಸೀದಿ ಮತ್ತು ‘ಡೋಮ್ ಆಫ್ ದ ರಾಕ್’ ಪ್ರಾರ್ಥನಾಲಯವನ್ನು ಮುಚ್ಚಲಾಗುವುದು ಎಂದು ಮಸೀದಿಯ ಧಾರ್ಮಿಕ ಅಧಿಕಾರಿಗಳು ರವಿವಾರ ಘೋಷಿಸಿದ್ದಾರೆ.

ಅದೇ ವೇಳೆ, ಇಸ್ಲಾಮ್‌ನ ಮೂರನೇ ಅತಿ ಪವಿತ್ರ ಮಸೀದಿ ಅಲ್-ಅಕ್ಸಾದ ಹೊರಗಿನ ಆವರಣದಲ್ಲಿ ಪ್ರಾರ್ಥನೆ ಮಾಡಬಹುದಾಗಿದೆ.

‘‘ಅಲ್-ಅಕ್ಸಾ ಮಸೀದಿಯ ಒಳಗಿನ ಮುಚ್ಚಿದ ಪ್ರಾರ್ಥನಾ ಸ್ಥಳಗಳನ್ನು ಮುಂದಿನ ಸೂಚನೆವರೆಗೆ ಮುಚ್ಚಲು ಇಸ್ಲಾಮಿಕ್ ವಕ್ಫ್ ಇಲಾಖೆ ನಿರ್ಧರಿಸಿದೆ. ಕೊರೋನವೈರಸ್ ಸೋಂಕು ಹರಡುವುದನ್ನು ನಿಲ್ಲಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’’ ಎಂದು ಅಲ್-ಅಕ್ಸಾ ಮಸೀದಿಯ ನಿರ್ದೇಶಕ ಉಮರ್ ಕಿಸ್ವಾನಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಎಲ್ಲ ಪ್ರಾರ್ಥನೆಗಳನ್ನು ಅಕ್ಸಾ ಮಸೀದಿಯ ತೆರೆದ ಸ್ಥಳಗಳಲ್ಲಿ ನಿರ್ವಹಿಸಲಾಗುವುದು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News