ಜಪಾನ್ ಒಲಿಂಪಿಕ್ಸ್ ಸಮಿತಿಯ ಉಪ ಮುಖ್ಯಸ್ಥ ತಶಿಮಾಗೆ ಕೊರೋನ ವೆರಸ್ ಸೋಂಕು

Update: 2020-03-17 17:42 GMT

ಟೋಕಿಯೊ, ಮಾ.17: ತನಗೆ ಕೊರೋನ ವೈರಸ್ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಜಪಾನ್ ಒಲಿಂಪಿಕ್ಸ್ ಸಮಿತಿಯ ಉಪ ಮುಖ್ಯಸ್ಥ ಕೊರೊ ತಶಿಮಾ ಮಂಗಳವಾರ ತಿಳಿಸಿದ್ದಾರೆ. ಈ ಮೂಲಕ ಟೋಕಿಯೊ ನಗರ ಬೇಸಿಗೆ ಒಲಿಂಪಿಕ್ಸ್ ಗೇಮ್ಸ್‌ನ್ನು ಸುರಕ್ಷಿತವಾಗಿ ಆಯೋಜಿಸಲಿದೆಯೇ ಎಂಬ ಕುರಿತ ಅನುಮಾನ ಹೆಚ್ಚಾಗಿದೆ.

   ‘‘ಇಂದು ನನ್ನ ವೈದ್ಯಕೀಯ ಪರೀಕ್ಷೆಯ ಫಲಿತಾಂಶದಲ್ಲಿ ಕೊರೋನ ವೈರಸ್ ತಗಲಿರುವುದು ದೃಢಪಟ್ಟಿದೆ’’ ಎಂದು ಜಪಾನ್ ಫುಟ್ಬಾಲ್ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ತಶಿಮಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಫೆಬ್ರವರಿ 28ರಿಂದ ನಾನು ವಾಣಿಜ್ಯ ಪ್ರವಾಸದಲ್ಲಿದ್ದೆ. ಮೊದಲಿಗೆ ಬೆಲ್‌ಫಾಸ್ಟ್ ನಲ್ಲಿ ಅಂತರ್‌ರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ ಮಂಡಳಿಯ ಮಹಾಸಭೆಯಲ್ಲಿ ಹಾಜರಾಗಿದ್ದೆ. ಮಾರ್ಚ್ 2ರಂದು ಆ್ಯಮ್‌ಸ್ಟರ್‌ಡಮ್‌ಗೆ ತೆರಳಿ ಯುಇಎಫ್‌ಎ ಸಭೆಯಲ್ಲಿ 2023ರ ಮಹಿಳಾ ವಿಶ್ವಕಪ್‌ನಲ್ಲಿ ಜಪಾನ್ ಪರ ಬಿಡ್ ಸಲ್ಲಿಕೆ ಮಾಡಿದ್ದೆ. ಮಾರ್ಚ್ 3ರಂದು ಯುಇಎಫ್‌ಎ ಮಹಾಸಭೆಯಲ್ಲಿ ಹಾಜರಾಗಿದ್ದೆ. ಮಾರ್ಚ್ ಆರಂಭದಲ್ಲಿ ಆ್ಯಮ್‌ಸ್ಟರ್‌ಡಮ್ ಹಾಗೂ ಯುರೋಪ್‌ನಲ್ಲಿ ಕೊರೋನ ವೈರಸ್‌ನ ಭಯ ಈಗಿನಷ್ಟು ಇರಲಿಲ್ಲ. ಪ್ರತಿಯೊಬ್ಬರು ತಬ್ಬಿಕೊಳ್ಳುವುದು, ಕೈಲುಕುವುದು ಹಾಗೂ ಕೆನ್ನ್ನೆಗೆ ಚುಂಬಿಸುವುದನ್ನು ಮಾಡುತ್ತಿದ್ದರು ಎಂದು ತಶಿಮಾ ತಿಳಿಸಿದ್ದಾರೆ.

ತಶಿಮಾ ಅವರು ಜಪಾನ್ ಮಹಿಳಾ ತಂಡದ ಪಂದ್ಯವನ್ನು ವೀಕ್ಷಿಸಲು ಅಮೆರಿಕಕ್ಕೆ ತೆರಳಿದ್ದರು. ಆಗ ಅವರ ಮಹಿಳಾ ವಿಶ್ವಕಪ್‌ಗಾಗಿ ಲಾಬಿ ನಡೆಸಿದ್ದರು. ಮಾರ್ಚ್ 8ರಂದು ಸ್ವದೇಶಕ್ಕೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News