ಕೇರಳ -ಕರ್ನಾಟಕ ಸಂಪರ್ಕ ರಸ್ತೆ ಗಡಿ ಬಂದ್ : ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾಸರಗೋಡು ಸಂಸದ

Update: 2020-03-30 08:40 GMT

ಹೊಸದಿಲ್ಲಿ, ಮಾ.30: ಮಹಾಮಾರಿ ಕೊರೋನ ವೈರಸ್ ಹರಡುತ್ತಿರುವುದನ್ನು ತಪ್ಪಿಸಲು ಕರ್ನಾಟಕ ಸರಕಾರವು ಕೇರಳ ಸಂಪರ್ಕಿಸುವ  ರಸ್ತೆಗಳನ್ನು ಕರ್ನಾಟಕದ ಗಡಿಯಲ್ಲಿ ಮುಚ್ಚಿರುವುದನ್ನು ಪ್ರಶ್ನಿಸಿ ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿತ್ತಾನ್ ಸೋಮವಾರ  ಸುಪ್ರೀಂ ಕೋರ್ಟ್  ಮೆಟ್ಟಿಲೇರಿದ್ದಾರೆ.

ಕೇರಳ ಸಂಪರ್ಕದ ಹೆದ್ದಾರಿ ಮುಚ್ಚಿರುವುದನ್ನು ತೆರವುಗೊಳಿಸುವಂತೆ ಮತ್ತು ಕರ್ನಾಟಕ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸಂಸದ ಉನ್ನಿತ್ತಾನ್ ಅವರು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಕೇರಳದಿಂದ ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ   ಕರೆದೊಯ್ಯುವ ಆ್ಯಂಬುಲೆನ್ಸ್ ಗಳಿಗೂ ಕರ್ನಾಟಕ್ಕೆ ಪ್ರವೇಶ ನಿರಾಕರಿಸಲಾಗುತ್ತಿದೆ.  ಕರ್ನಾಟಕ ಪ್ರವೇಶಿಸಲು  ಆ್ಯಂಬುಲೆನ್ಸ್ ವೊಂದಕ್ಕೆ  ಅನುಮತಿ ನೀಡದ  ಕಾರಣದಿಂದಾಗಿ ಅ್ಯಂಬುಲೆನ್ಸ್ ನಲ್ಲಿದ್ದ  ರೋಗಿಯೊಬ್ಬರು ಚಿಕಿತ್ಸೆ ದೊರೆಯದ ಕಾರಣದಿಂದಾಗಿ ಮೃತಪಟ್ಟಿದ್ದಾರೆ ಎಂದು ಸಂಸದರು ಮನವಿಯಲ್ಲಿ ಸುಪ್ರೀಂ ಕೋರ್ಟ್ ನ ಗಮನ ಸೆಳೆದಿದ್ದಾರೆ.

ಮುಖ್ಯ ಮಂತ್ರಿ ಪಿಣರಾಯ್ ವಿಜಯನ್ ಅವರು ಕೂಡಾ  ಕರ್ನಾಟಕದ ಗಡಿ ರಸ್ತೆಯನ್ನು ಮುಚ್ಚಿರುವುದನ್ನು ತೆರವುಗೊಳಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News