ಕೇರಳದಲ್ಲಿ ವಲಸೆ ಕಾರ್ಮಿಕರಿಗೆ ಸಿಂಪಡಿಸಿದ್ದು ಸೋಪ್ ಮಿಶ್ರಿತ ನೀರು: ಅಧಿಕಾರಿಗಳ ಸ್ಪಷ್ಟೀಕರಣ

Update: 2020-03-31 10:39 GMT

ತಿರುವನಂತಪುರಂ: ಉತ್ತರ ಪ್ರದೇಶದ ಬರೇಲಿಯಲ್ಲಿ ವಲಸಿಗ ಕಾರ್ಮಿಕರ ಗುಂಪಿನ ಮೇಲೆ ರವಿವಾರ ರಾಸಾಯನಿಕ ದ್ರಾವಣವನ್ನು ಸಿಂಪಡಿಸಿದ ಅಧಿಕಾರಿಗಳು ಭಾರೀ ಆಕ್ರೋಶ ಎದುರಿಸುತ್ತಿರುವಂತೆಯೇ ಕೇರಳದ್ದು ಎಂದು ಹೇಳಲಾದ ಅಂತಹುದೇ ಇನ್ನೊಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿದ ಅಲ್ಲಿನ ಅಗ್ನಿಶಾಮಕ ದಳ ಅಧಿಕಾರಿಗಳು ತಾವು ಸೋಪ್ ಮತ್ತು ನೀರಿನ ಮಿಶ್ರಣವನ್ನು ಸಿಂಪಡಿಸಿದ್ದಾಗಿ ಹೇಳಿದ್ದಾರೆ.

ಕೇರಳದಲ್ಲಿ ಕಳೆದ ವಾರ ಕೇರಳ-ಕರ್ನಾಟಕ ಗಡಿಯ ಮುತ್ತುಂಗ ಎಂಬಲ್ಲಿ 40 ಮಂದಿ ಬೈಕ್ ಸವಾರರ ಗುಂಪೊಂದರ ಮೇಲೆ ದ್ರಾವಣ ಸಿಂಪಡಣೆ ನಡೆದಿರುವ ವೀಡಿಯೋ ಕೂಡ ಸುದ್ದಿಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸ್ಪಷ್ಟೀಕರಣ ಬಂದಿದೆ.

``ಜಾತಿ, ಧರ್ಮಗಳನ್ನು ಪರಿಗಣಿಸದೆ ಎಲ್ಲರ ಮೇಲೆಯೂ ಈ ದ್ರಾವಣ ಸಿಂಪಡಿಸಲಾಗಿತ್ತು. ಆ ಸಂದರ್ಭ ವಯನಾಡ್‍ನಲ್ಲಿ ಒಂದೇ ಒಂದು ಕೋವಿಡ್-19 ಪ್ರಕರಣಗಳು ವರದಿಯಾಗಿರಲಿಲ್ಲ'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News