ಲಾಕ್‌ಡೌನ್ ವೇಳೆ ಜನಿಸಿರುವ ಅವಳಿ ಮಕ್ಕಳಿಗೆ 'ಕೊರೋನ','ಕೋವಿಡ್' ಹೆಸರು!

Update: 2020-04-03 08:25 GMT

  ರಾಯ್‌ಪುರ, ಎ.3: ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ.ಆದರೆ, ಇದರ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದ ಛತ್ತೀಸ್‌ಗಡದ ದಂಪತಿ ತಮ್ಮ ನವಜಾತ ಅವಳಿ ಮಕ್ಕಳಿಗೆ 'ಕೊರೋನ' ಹಾಗೂ 'ಕೋವಿಡ್' ಎಂದು ಹೆಸರಿಟ್ಟಿದ್ದಾರೆ.

ಈ ಎರಡು ಪದ ಜನರ ಮನಸ್ಸಲ್ಲಿ ಭಯ ಹುಟ್ಟಿಸಿದೆ. ಆದರೆ, ಕೊರೋನ ವೈರಸ್ ಪಸರಿಸುವುದನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ ಬಳಿಕ ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿತ್ತು. ಈ ಸಂದರ್ಭದಲ್ಲಿ ತಮಗಾದ ಕಷ್ಟ-ಕಾರ್ಪಣ್ಯ ವಿರುದ್ಧ ವಿಜಯದ ಸಂಕೇತವಾಗಿ ಗಂಡು ಹಾಗೂ ಹೆಣ್ಣು ಅವಳಿ ಮಕ್ಕಳಿಗೆ 'ಕೊರೋನ' ಹಾಗೂ 'ಕೋವಿಡ್' ಎಂದು ನಾಮಕರಣ ಮಾಡಿದ್ದಾರೆ. ಈ ಅವಳಿ ಮಕ್ಕಳು ರಾಯ್‌ಪುರದ ಸರಕಾರಿ ಆಸ್ಪತ್ರೆಯಲ್ಲಿ ಮಾ.27ರಂದು ಬೆಳಗ್ಗಿನ ಜಾವ ಜನಿಸಿದ್ದವು.

   "ನಾನು ಗಂಡು ಹಾಗೂ ಹೆಣ್ಣು ಮಗುವಿಗೆ ಜನ್ಮನೀಡಿದ್ದೇನೆ. ಗಂಡು ಮಗುವಿಗೆ ಕೋವಿಡ್ ಹಾಗೂ ಹೆಣ್ಣು ಮಗುವಿಗೆ ಕೊರೋನ ಎಂದು ಹೆಸರಿಟ್ಟಿದ್ದೇವೆ. ಹಲವು ಕಷ್ಟಗಳನ್ನು ಎದುರಿಸಿದ ಬಳಿಕ ಹೆರಿಗೆಯಾಗಿದೆ. ಹೀಗಾಗಿ ನಾನು ಹಾಗೂ ನನ್ನ ಪತಿ ಈ ಸಂದರ್ಭವನ್ನು ಸ್ಮರಣೀಯವಾಗಿಸಲು ನಿರ್ಧರಿಸಿದೆವು. ಈ ವೈರಸ್ ಅಪಾಯಕಾರಿ ಹಾಗೂ ಮಾರಣಾಂತಿಕ ಎಂದು ನಮಗೆ ಗೊತ್ತು. ಆದರೆ ಈ ವೈರಸ್ ಬಂದ ಬಳಿಕ ಎಲ್ಲರೂ ಸ್ವಚ್ಛತೆ,ನೈರ್ಮಲ್ಯದತ್ತ ಗಮನ ನೀಡುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ನಮ್ಮ ಮಕ್ಕಳಿಗೆ ಕೊರೋನ ಹಾಗೂ ಕೋವಿಡ್ ಎಂದು ಕರೆಯಲಾರಂಭಿಸಿದರು.ನಾವು ಕೂಡ ನಮ್ಮ ಅವಳಿ ಮಕ್ಕಳಿಗೆ ಇದೇ ಹೆಸರಿಡಲು ನಿರ್ಧರಿಸಿದೆವು'' ಎಂದು 27ರ ಹರೆಯದ ಪ್ರೀತಿ ವರ್ಮಾ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ದಂಪತಿ ರಾಜ್ಯ ರಾಜಧಾನಯ ಪುರಾನಿ ಬಸ್ತಿ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

"ತಾಯಿ-ಮಕ್ಕಳು ಆರೋಗ್ಯವಾಗಿದ್ದು, ಇತ್ತೀಚೆಗೆ ಡಿಸ್ಚಾರ್ಚ್ ಆಗಿದ್ದಾರೆ. ಆಸ್ಪತ್ರೆಗೆ ಬಂದ 45 ನಿಮಿಷಗಳಲ್ಲಿ ಹೆರಿಗೆಯಾಗಿತ್ತು. ಆಸ್ಪತ್ರೆಯಲ್ಲಿ ಅವಳಿ ಮಕ್ಕಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ದಂಪತಿ ಈ ಮಕ್ಕಳಿಗೆ ಕೋವಿಡ್ ಹಾಗೂ ಕೊರೋನ ಎಂದು ಹೆಸರಿಟ್ಟಿದ್ದಾರೆ'' ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶುಭ್ರ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News