‘ಲಾಕ್‌ಡೌನ್’: ಒಂದು ಸಲಹೆ

Update: 2020-04-05 17:24 GMT

ಮಾನ್ಯರೇ,

ಕೋವಿಡ್-19 ಮಾರಿ ಹರಡುತ್ತಿರುವ ಈ ದಿನಗಳಲ್ಲಿ ಎಲ್ಲ ರಾಜ್ಯ ಸರಕಾರಗಳೂ ವಲಸೆ ಕಾರ್ಮಿಕರು ಮುಂತಾದವರಿಗೆ ಊಟದ ವ್ಯವಸ್ಥೆ ಮಾಡುತ್ತಿವೆಯಷ್ಟೆ. ಅದಕ್ಕಾಗಿ, ಅವುಗಳು ಪ್ರಾಯಶಃ ದೊಡ್ಡ ದೊಡ್ಡ ಅಡಿಗೆ ಮನೆಗಳನ್ನು ಹುಟ್ಟುಹಾಕಬೇಕು; ಗುತ್ತಿಗೆದಾರರನ್ನು ಗೊತ್ತು ಮಾಡಿಕೊಳ್ಳಬೇಕು. ಅದಕ್ಕೆ ಬದಲಾಗಿ, ಆ ಸರಕಾರಗಳು ಸದ್ಯ ಲಾಕ್‌ಡೌನ್ ಆಣತಿಯಿಂದಾಗಿ ಮುಚ್ಚಿರುವ ಹೊಟೇಲುಗಳ ಪೈಕಿ ಆಯ್ದ ಕೆಲವು ಹೊಟೇಲುಗಳ ಮಾಲಕರುಗಳ ಜೊತೆ ಮಾತನಾಡಿ, ಆ ಹೊಟೇಲುಗಳಲ್ಲಿ ಈಗಾಗಲೇ ಇರುವ ಅಡಿಗೆಮನೆ ಸೌಕರ್ಯ ಹಾಗೂ ಅಲ್ಲಿನ ಸಿಬ್ಬಂದಿಯ ಸೇವೆಯನ್ನು ಬಳಸಿ, ಅಲ್ಲೆಲ್ಲ ಅಡಿಗೆಯಾಗುವಂತೆ ಮಾಡಬಹುದಲ್ಲವೇ? ಆ ಹೊಟೇಲುಗಳು ಸಾರ್ವಜನಿಕರಿಗೆ ತೆರೆದಿರಬಾರದು. ಸರಕಾರವು ತಮಗೆ ಒಪ್ಪಿಸಿರುವ ಕೆಲಸವನ್ನು ಮುಚ್ಚಿದ ಬಾಗಿಲ ಹಿಂದೆ ಮಾಡಬೇಕು ಮತ್ತು ತಾವು ತಯಾರಿಸಿದ ಊಟಕ್ಕೆ ತಗುಲಿದ ಅಸಲಿ ಖರ್ಚಿನ ಬಾಬ್ತನ್ನು ಮಾತ್ರ ಸರಕಾರದಿಂದ ಪಡೆಯಬೇಕು. ಆ ಊಟವನ್ನು ಸರಕಾರಿ ಸಿಬ್ಬಂದಿಯೇ ಆ ಸುತ್ತಮುತ್ತಲಿನ, ಅದಾಗಲೇ ನಿಖರವಾಗಿ ಗೊತ್ತು ಮಾಡಿಕೊಂಡ, ಲೇಬರ್ ಕ್ಯಾಂಪುಗಳಲ್ಲಿ ವಾಸಮಾಡುವವರಿಗೆ ಮತ್ತು ಅಂತಹ ಊಟದ ಅಗತ್ಯವಿರುವ ಬೇರೆಯವರಿಗೆ ತಲುಪಿಸಬೇಕು. ಇಂತಹದ್ದನ್ನು ಆಯಾ ರಾಜ್ಯ ಸರಕಾರವು ತನ್ನ ರಾಜ್ಯದ ಹೊಟೇಲು ಮಾಲಕರ ಸಂಘಗಳು ಹಾಗೂ ಹೊಟೇಲು ಕೆಲಸಗಾರರ ಸಂಘಗಳೊಡನೆ ಸಮಾಲೋಚಿಸಿ ಮಾಡಬಹುದು. ಇದು ವಿಕೇಂದ್ರೀಕರಣದ ಮಾರ್ಗ; ಈಗಾಗಲೇ ಇರುವ ಮೂಲಸೌಕರ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮಾರ್ಗ.

Writer - ರಘುನಂದನ, ಬೆಂಗಳೂರು

contributor

Editor - ರಘುನಂದನ, ಬೆಂಗಳೂರು

contributor

Similar News