ಕೊರೋನ ವೈರಸ್ ಗೆ ವಿಶ್ವಾದ್ಯಂತ ಬಲಿಯಾದವರು ಒಂದೂವರೆ ಲಕ್ಷ ಮಂದಿ !

Update: 2020-04-18 03:41 GMT

ಪ್ಯಾರೀಸ್ : ವಿಶ್ವದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ, ಮನುಕುಲವನ್ನೇ ಬೆಚ್ಚಿಬೀಳಿಸಿದ ಮಾರಕ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1.5 ಲಕ್ಷವನ್ನು ತಲುಪಿದೆ.

ಅಧಿಕೃತ ಅಂಕಿ ಅಂಶಗಳ ಆಧಾರದಲ್ಲಿ ಎಎಫ್‌ಪಿ ಕ್ರೋಢೀಕರಿಸಿದ ಒಟ್ಟು ಸಂಖ್ಯೆಯ ಪ್ರಕಾರ ಶುಕ್ರವಾರ ರಾತ್ರಿ 7 ಗಂಟೆಯ ವೇಳೆಗೆ ವಿಶ್ವಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ 1,50,142 ಆಗಿದೆ. ಈ ಪೈಕಿ ಮೂರನೇ ಎರಡರಷ್ಟು ಅಂದರೆ 96,721 ಸಾವು ಯೂರೋಪ್‌ನಲ್ಲೇ ಸಂಭವಿಸಿದೆ. ಅಮೆರಿಕ ಗರಿಷ್ಠ ಸಾವು ಸಂಭವಿಸಿದ ದೇಶವಾಗಿದ್ದು, ಒಟ್ಟು 34,575 ಸಾವು ಇಲ್ಲಿ ಸಂಭವಿಸಿದೆ.

ಆಯಾ ರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ವಿಶ್ವದ 193 ದೇಶಗಳಲ್ಲಿ 22,07,730 ಮಂದಿ ಸೋಂಕಿತರಿದ್ದಾರೆ. ಆದರೆ ಸೋಂಕಿತರ ಪ್ರಮಾಣ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಹಲವು ದೇಶಗಳಲ್ಲಿ ಗಂಭೀರ ಪ್ರಕರಣಗಳನ್ನು ಮಾತ್ರ ಪರೀಕ್ಷೆಗೆ ಗುರಿಪಡಿಸಲಾಗಿದೆ. ಇದುವರೆಗೆ 4.83 ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ಅಮೆರಿಕದ ಬಳಿಕ ಇಟೆಲಿಯಲ್ಲಿ ಗರಿಷ್ಠ ಅಂದರೆ 22,745 ಸಾವು ಸಂಭವಿಸಿದ್ದು, 19,478 ಸಾವು ಸಂಭವಿಸಿದ ಸ್ಪೇನ್ ಹಾಗೂ 18,681 ಸಾವು ಸಂಭವಿಸಿದ ಫ್ರಾನ್ಸ್ ನಂತರದ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News