ಆಮೆಗಳಿರುವ ಟ್ಯಾಂಕ್‌ನಲ್ಲಿ ಲಿಖಿತ್ ತರಬೇತಿ

Update: 2020-04-30 17:50 GMT

ಹೊಸದಿಲ್ಲಿ, ಎ.30: ಆಮೆಗಳು ಮತ್ತು ಮೀನುಗಳಿರುವ ತಾತ್ಕಾಲಿಕ ಫಾರ್ಮ್ ಪೂಲ್‌ನಲ್ಲಿ ಈಜುವುದರ ಮೂಲಕ ಈಜುಪಟು ಎಸ್.ಪಿ. ಲಿಖಿತ್ ತರಬೇತಿ ನಡೆಸುತ್ತಿದ್ದಾರೆ.

ಭಾರತದಲ್ಲಿ ಲಾಕ್‌ಡೌನ್ ಮಧ್ಯೆ ಕ್ರೀಡಾ ಪಟುಗಳು ಸದೃಢವಾಗಿರಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. 2020 ರ ಒಲಿಂಪಿಕ್ಸ್ ಅನ್ನು ಒಂದು ವರ್ಷ ಮುಂದೂಡಿರುವುದರಿಂದ ಭಾರತದ ಅಗ್ರ ಬ್ರೀಸ್ಟ್‌ಸ್ಟ್ರೋಕ್ ಈಜುಗಾರ ಲಿಖಿತ್‌ಗೆ 100 ಮೀಟರ್ ಓಟಕ್ಕೆ 59.93 ಸೆಕೆಂಡುಗಳ ಅರ್ಹತಾ ಸಮಯವನ್ನು ತಲುಪಲು ಹೆಚ್ಚುವರಿ ಸಮಯ ಲಭಿಸಿದೆ.

ಲಿಖಿತ್ ಅವರು ಫೆಬ್ರವರಿಯಿಂದ ಕರ್ನಾಟಕ ರಾಜ್ಯದ ತಮ್ಮ ತರಬೇತುದಾರರ ತೋಟದಮನೆಯಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಈಗಾಗಲೇ ಜಲಚರಗಳು ವಾಸಿಸುತ್ತಿದ್ದ ತೊಟ್ಟಿಯಲ್ಲಿ ಈಜಿದ್ದಾರೆ. ಈ ತೊಟ್ಟಿಯ ಮೂಲಕ ಸಾಮಾನ್ಯವಾಗಿ ಬೆಳೆಗಳು ಮತ್ತು ತರಕಾರಿಗಳಿಗೆನೀರನ್ನು ಪೂರೈಸಲಾಗುತ್ತಿತ್ತು.

ಬೆಂಗಳೂರಿನ 21 ವರ್ಷದ ಯುವಕ ಲಿಖಿತ್ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ಇನ್ನೂ 2 ಸೆಕೆಂಡ್‌ಗಳಷ್ಟು ಮೊದಲು ಗುರಿ ತಲುಪಬೇಕಾಗಿದೆ. 20 ಮೀಟರ್ ಉದ್ದದ ಟ್ಯಾಂಕ್ ಹೊಂದಿರುವುದು ತನ್ನ ಅದೃಷ್ಟ ಎಂದು ಅವರು ಹೇಳಿದರು. ಕೋಚ್ ಪಾರ್ಥ ವಾರಣಾಶಿ 15 ಈಜುಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಒಂದೇ ವ್ಯತ್ಯಾಸವೆಂದರೆ ಕೊಳದಲ್ಲಿ ನೀರು ಚೆನ್ನಾಗಿಲ್ಲ, ಮೀನು ಮತ್ತು ಆಮೆಗಳಿವೆ. ಆದರೆ ಇದನ್ನು ಅವಲಂಬಿಸದೆ ನಮಗೆ ಬೇರೆ ಹಾದಿಗಳಿಲ್ಲ ಎಂದು ಲಿಖಿತ್ ಹೇಳಿದರು. ಎರಡನೇ ಬಾರಿ ನೇರ ಒಲಿಂಪಿಕ್ಸ್‌ಗೆಪ್ರವೇಶಿಸುವ ಗುರಿ ಹೊಂದಿರುವ ಭಾರತದ ಅಗ್ರ-400 ಮೀ. ಓಟಗಾರ ಮುಹಮ್ಮದ್ ಅನಸ್ ಅವರು ಲಾಕ್‌ಡೌನ್‌ನಿಂದ ತನ್ನ ಸಿದ್ಧತೆಗಳಿಗೆ ತೊಂದರೆಯಾಗಿದೆ ಎಂದು ಒಪ್ಪಿಕೊಂಡರು. ಮಿಶ್ರ 4  400 ಮೀಟರ್ ರಿಲೇ ತಂಡದ ಭಾಗವಾಗಿರುವ ಅನಸ್ ಫೆಬ್ರವರಿಯಲ್ಲಿ ಪಾಟಿಯಾಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ಗೆ ತೆರಳಿ ಭಾರತದಲ್ಲಿ ಕೋರೊನ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಲ್ಲಿಯೇ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News