ಇಂಗ್ಲೆಂಡ್ ಕ್ರಿಕೆಟ್ ತಂಡದ ಗೌರವ ಸದಸ್ಯರಾಗಿ ಕ್ಯಾಪ್ಟನ್ ಟಾಮ್ ಮೂರ್

Update: 2020-04-30 18:01 GMT

ಲಂಡನ್, ಎ.30: ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವೆಗಾಗಿ(ಎನ್‌ಎಚ್‌ಎಸ್)ಮಿಲಿಯನ್‌ಗಟ್ಟಲೆ ನಿಧಿ ಸಂಗ್ರಹಿಸಿರುವ, ಬ್ರಿಟನ್ ಎರಡನೇ ವಿಶ್ವ ಮಹಾಯುದ್ಧದ ಹಿರಿಯ ಕ್ಯಾಪ್ಟನ್ ಟಾಮ್ ಮೂರ್ ಗುರುವಾರ 100ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದು, ಅವರನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಗೌರವ ಸದಸ್ಯರನ್ನಾಗಿ ನೇಮಿಸಲಾಗಿದೆ.

ಇತ್ತೀಚೆಗೆ ತನ್ನ ಮನೆಯ ಗಾರ್ಡನ್‌ನಲ್ಲಿ 100 ಸುತ್ತು ನಡೆದಾಡಿದ ಮೂರ್ ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ಎನ್‌ಎಚ್‌ಎಸ್‌ಗೆ ನೆರವಾಗಲು ನಿಧಿ ಸಂಗ್ರಹಿಸಿದ್ದರು. ಮೂರ್ 30 ಮಿಲಿಯನ್ ಪೌಂಡ್‌ಗಳು(37.53 ಮಿಲಿಯನ್ ಡಾಲರ್)ಮೊತ್ತ ಸಂಗ್ರಹಿಸಿದ್ದರು. ಕೊರೋನದಿಂದ ತತ್ತರಿಸಿರುವ ದೇಶದ ಜನರ ಹೃದಯವನ್ನು ಗೆಲ್ಲುವ ಜೊತೆಗೆ ಶ್ಲಾಘನೆಗೆ ಒಳಗಾಗಿದ್ದರು.

‘‘ದೇಶದ ಎದೆಬಡಿತವಾಗಿರುವ ಕ್ಯಾಪ್ಟನ್ ಟಾಮ್ ಮೂರ್‌ರನ್ನು ಅವರ ಹುಟ್ಟುಹಬ್ಬದ ದಿನದಂದು ನಾವು ಇಂಗ್ಲೆಂಡ್ ಕ್ರಿಕೆಟ್ ತಂಡದ ಅಧಿಕೃತ ಸದಸ್ಯರನ್ನಾಗಿ ಮಾಡಿದ್ದೇವೆ’’ ಎಂದು ಮಾಜಿ ನಾಯಕ ಮೈಕಲ್ ವಾನ್ ತಿಳಿಸಿದ್ದಾರೆ. ಫಾರ್ಮುಲಾ ವನ್ ತಂಡಗಳು ಹಾಗೂ ಚಾಲಕರುಗಳುಮೂರ್‌ಗೆ ಜನ್ಮದಿನದ ಶುಭಾಶಯ ಸಂದೇಶ ಕಳುಹಿಸಿಕೊಟ್ಟಿದ್ದಾರೆ. ಮೂರ್‌ಮೆಕ್‌ಲಾರೆನ್ ಎಫ್1 ತಂಡದ ದೊಡ್ಡ ಅಭಿಮಾನಿಯಾಗಿದ್ದಾರೆ.

ವಿಶ್ವದಾದ್ಯಂತ ಕ್ರೀಡಾ ಸ್ಪರ್ಧೆಗಳು ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಮೂರ್ ಅವರ ಸಾಧನೆಯು ಬಿಬಿಸಿ ವರ್ಷದ ಕ್ರೀಡಾ ವ್ಯಕ್ತಿತ್ವ ಪ್ರಶಸ್ತಿಯಅಚ್ಚರಿಯ ಸ್ಪರ್ಧಿಯನ್ನಾಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News