ಜಿಮ್ನಾಸ್ಟಿಕ್ ಕೋಚ್ ಮ್ಯಾಗಿ ಹ್ಯಾನಿ ಅಮಾನತು

Update: 2020-04-30 18:12 GMT

ಹೊಸದಿಲ್ಲಿ, ಎ.30: ಕ್ರೀಡಾಪಟುಗಳೊಂದಿಗೆ ವಾಗ್ವಾದ ನಡೆಸಿ ನಿಂದಿಸಿರುವುದಕ್ಕೆ ಅಮೆರಿಕದ ಮಾಜಿ ಒಲಿಂಪಿಕ್ಸ್ ತರಬೇತುಗಾರ್ತಿ ಮ್ಯಾಗಿ ಹ್ಯಾನಿ ಅವರನ್ನು ಯುಎಸ್‌ಎ ಜಿಮ್ನಾಸ್ಟಿಕ್ಸ್ ಎಂಟು ವರ್ಷಗಳ ಕಾಲ ಅಮಾನತುಗೊಳಿಸಿದೆ.

ಹ್ಯಾನಿ ಅವರನ್ನು ಅಮಾನತುಗೊಳಿಸಿ ದಂಡವನ್ನು ವಿಧಿಸಿರುವುದನ್ನು ಯುಎಸ್‌ಎ ಜಿಮ್ನಾಸ್ಟಿಕ್ಸ್ ದೃಢಪಡಿಸಿದೆ.

ಎರಡು ತಿಂಗಳ ವಿಚಾರಣೆಯ ನಂತರ ಒಲಿಂಪಿಕ್ಸ್ ಚಾಂಪಿಯನ್ ಲಾರಿ ಹೆರ್ನಾಂಡೆಝ್ ತನ್ನ ದೀರ್ಘಕಾಲದ ತರಬೇತುದಾರ ಮತ್ತು ವಿಶ್ವ ಚಾಂಪಿಯನ್ ರಿಲೆ ಮೆಕ್ಕಸ್ಕರ್ ವಿರುದ್ಧ ಹ್ಯಾನಿ ಅವರನ್ನು ಟೀಕಿಸುವ ಪತ್ರ ಬರೆದಿದ್ದಾರೆ.

ಸ್ವತಂತ್ರ ವಿಚಾರಣಾ ಆಯೋಗವು ವಕೀಲರು, ಕ್ಲಬ್ ಮಾಲಕರು ಮತ್ತು ಮಾಜಿ ರಾಷ್ಟ್ರೀಯ ತಂಡದ ಕ್ರೀಡಾಪಟು ಸೇರಿದಂತೆ ಜಿಮ್ನಾಸ್ಟಿಕ್ ಸಮುದಾಯದ ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ.

ಹ್ಯಾನಿ ಯುಎಸ್‌ಎ ಜಿಮ್ನಾಸ್ಟಿಕ್ಸ್ ನೀತಿ ಸಂಹಿತೆ, ಸುರಕ್ಷಿತ ಕ್ರೀಡಾ ನೀತಿ ಮತ್ತು ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಯುಎಸ್‌ಎ ಜಿಮ್ನಾಸ್ಟಿಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಹ್ಯಾನಿ ಅವರನ್ನು ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಮತ್ತು ಯುಎಸ್‌ಎ ಜಿಮ್ನಾಸ್ಟಿಕ್ಸ್ ಕ್ರೀಡಾಪಟುಗಳ ಅಥವಾ ಸದಸ್ಯ ಕ್ಲಬ್‌ಗಳಲ್ಲಿ ಯಾವುದೇ ತರಬೇತಿಯನ್ನು ಎಂಟು ವರ್ಷಗಳವರೆಗೆ ನೀಡದಂತೆ ಅಮಾನತುಗೊಳಿಸಲಾಗಿದೆ. ಇದು ತಕ್ಷಣದಿಂದಜಾರಿಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News