ಕೊರೋನ ಬಿಕ್ಕಟ್ಟು ಕೊನೆಯಾದ ಬಳಿಕ ಜಾಗತಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಭಾರತ

Update: 2020-05-03 08:30 GMT

ಹೊಸದಿಲ್ಲಿ: ಕೋವಿಡ್-19 ನಂತರದ ಜಾಗತಿಕ ವ್ಯವಸ್ಥೆಯಲ್ಲಿ ಭಾರತ ಮಹತ್ವದ ಪಾತ್ರ ವಹಿಸಲಿದೆ ಎಂದು ಹಿರಿಯ ಬಿಜೆಪಿ ಮುಖಂಡ ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿಯವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಇಡೀ ವಿಶ್ವವೇ ಶ್ಲಾಘಿಸಿದೆ. ಇದು ವಿಶ್ವದಲ್ಲಿ ಭಾರತದ ಪ್ರತಿಷ್ಠೆಯನ್ನು ವಿಸ್ತರಿಸಿದೆ. ಕೋವಿಡ್-19 ಬಳಿಕ ರೂಪುಗೊಳ್ಳುವ ವಿಶ್ವ ವ್ಯವಸ್ಥೆಯಲ್ಲಿ ಭಾರತ ಮಹತ್ವದ ಪಾತ್ರವನ್ನು ವಹಿಸಲು ನೆರವಾಗಲಿದೆ” ಎಂದು ಎಎನ್‍ಐ ಜತೆ ಮಾತನಾಡಿದ ಅವರು ಹೇಳಿದರು.

ವಿಶ್ವಾದ್ಯಂತ ಕೋವಿಡ್-19 ಸಾಂಕ್ರಾಮಿಕದ ಬಳಿಕ ಎಲ್ಲೆಡೆ ಕಾರ್ಯಸೂಚಿಯೇ ಬದಲಾಗಲಿದೆ. ಆರೋಗ್ಯ ಸೇವೆ ಜಾಗತಿಕ ಮಟ್ಟದಲ್ಲಿ ಪ್ರಮುಖ ಕಾರ್ಯಸೂಚಿ ಎನಿಸಲಿದೆ. ಈ ವಿಷಯ ವಿಶ್ವದಲ್ಲಿ ಪ್ರಧಾನ ಅಂಶವಾಗಲಿದೆ ಎಂದವರು ಹೇಳಿದರು.

ಈ ಸಾಂಕ್ರಾಮಿಕದ ಅವಧಿಯಲ್ಲಿ 80ಕ್ಕೂ ಹೆಚ್ಚು ದೇಶಗಳಿಗೆ ನಾವು ಔಷಧಿ ಒದಗಿಸಿದ್ದೇವೆ. ಆರೋಗ್ಯ ಸೇವಾ ಕ್ಷೇತ್ರದಲ್ಲಿ ಭಾರತ ಅಗ್ರಗಣ್ಯ ದೇಶವಾಗಿದೆ. ಅಂತೆಯೇ ಫಾರ್ಮಸ್ಯೂಟಿಕಲ್, ಐಟಿ ಸೇವೆಯಲ್ಲೂ ಮುಂಚೂಣಿಯಲ್ಲಿರುವ ನಾವು ಇಡೀ ವಿಶ್ವಕ್ಕೆ ಉದಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಹೊಂದಿದ್ದೇವೆ. ಹವಾಮಾನ ಬದಲಾವಣೆ ಮತ್ತು ಪರಿಸರ ವಿಚಾರಗಳಿಗೆ ಮೋದಿ ಅದ್ಭುತ ಕೊಡುಗೆ ನೀಡಿದ್ದು, ಹೊಸ ಯುಗದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ” ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News