ವಲಸೆ ಕಾರ್ಮಿಕರ ರೈಲು ಟಿಕೆಟ್ ದರವನ್ನು ‘ಪಿಎಂ ಕೇರ್ಸ್’ ಮೂಲಕ ಪಾವತಿಸಿ: ಸುಬ್ರಮಣಿಯನ್ ಸ್ವಾಮಿ ಆಕ್ರೋಶ

Update: 2020-05-04 11:17 GMT

ಹೊಸದಿಲ್ಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಅತಂತ್ರರಾಗಿರುವ ವಲಸಿಗ ಕಾರ್ಮಿಕರನ್ನು ವಾಪಸ್ ಅವರ ಊರಿಗೆ ಕಳುಹಿಸುವ ಸಂದರ್ಭ ಅವರಿಂದ ರೈಲು ಟಿಕೆಟ್ ದರ ಪಡೆಯುತ್ತಿರುವ ಕೇಂದ್ರ ಸರಕಾರವನ್ನು ರಾಜ್ಯಸಭಾ ಸಂಸದ ಹಾಗೂ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ಸರಕಾರವನ್ನು ‘ಮೂರ್ಖ' ಎಂದು ಜರಿದ ಸ್ವಾಮಿ “ವಿದೇಶಗಳಲ್ಲಿ ಬಾಕಿಯುಳಿದಿದ್ದ ಭಾರತೀಯರನ್ನು ಏರ್ ಇಂಡಿಯಾ ಉಚಿತವಾಗಿ ವಾಪಸ್ ಕರೆತಂದಿದೆ. ರೈಲ್ವೇ ಇಲಾಖೆ ಒಪ್ಪದೇ ಇದ್ದರೆ ಟಿಕೆಟ್ ದರವನ್ನು ಪಿಎಂ ಕೇರ್ಸ್ ಮುಖಾಂತರ ಪಾವತಿಸುವಂತೆ ಮಾಡಬಾರದೇಕೆ?'' ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಕೂಡ ಸರಕಾರದ ಕ್ರಮವನ್ನು ಟೀಕಿಸಿದೆಯಲ್ಲದೆ ವಲಸಿಗ ಕಾರ್ಮಿಕರ ಟಿಕೆಟ್ ವೆಚ್ಚವನ್ನು ಭರಿಸುವಂತೆ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಈಗಾಗಲೇ ಪಕ್ಷದ ರಾಜ್ಯ ಘಟಕಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News