ಕಾರ್ಮಿಕರಿಂದ ಸಂಗ್ರಹಿಸಲಾಗುವ ರೈಲು ಟಿಕೆಟ್ ದರಗಳ ಬಗ್ಗೆ ಸುಪ್ರೀಂಗೆ ಮಾಹಿತಿ ನೀಡಲು ನಿರಾಕರಿಸಿದ ಕೇಂದ್ರ
ಹೊಸದಿಲ್ಲಿ : ವಲಸಿಗ ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನು ಏರ್ಪಾಟು ಮಾಡಿರುವ ಕೇಂದ್ರ ಸರಕಾರ ಅವರಿಂದ ಟಿಕೆಟ್ ಹಣವನ್ನು ಸಂಗ್ರಹಿಸುತ್ತಿದೆ ಎಂಬ ಆರೋಪಗಳನ್ನು ಪುಷ್ಠೀಕರಿಸುವಂತೆ, ಟಿಕೆಟ್ ದರಗಳ ಕುರಿತಂತೆ ಸುಪ್ರೀಂ ಕೋರ್ಟ್ ಜತೆ ಮಾಹಿತಿ ಹಂಚಿಕೊಳ್ಳಲು ಮೇ 5ರಂದು ನಿರಾಕರಿಸಿದೆ.
ತಮ್ಮ ಮನೆಗಳಿಗೆ ಹಿಂದಿರುಗುತ್ತಿರುವ ಸಾವಿರಾರು ವಲಸಿಗ ಕಾರ್ಮಿಕರಿಗೆ ತಕ್ಷಣ ಸಹಾಯವೊದಗಿಸಬೇಕೆಂದು ಕೋರಿ ಸಾಮಾಜಿಕ ಹೋರಾಟಗಾರ ಜಗದೀಪ್ ಎಸ್ ಛೋಕರ್ ಅವರು ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣೆ ಸಂದರ್ಭ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಟಿಕೆಟ್ ದರ ಕುರಿತಂತೆ ಹಾಗೂ ವಲಸಿಗ ಕಾರ್ಮಿಕರಿಂದಲೇ ನೇರವಾಗಿ ಹಣ ಸಂಗ್ರಹಿಸಲಾಗುತ್ತಿದೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸಲು ತಮಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ ಎಂದರು.
ಕಾಮಿಕರನ್ನು ಅವರ ಮನೆಗಳಿಗೆ ಕಳುಹಿಸುರ ಪ್ರಕ್ರಿಯೆಯಲ್ಲಿ ಕೇಂದ್ರ ಸರಕಾರ ಎಷ್ಟು ವೆಚ್ಚ ಭರಿಸುತ್ತಿದೆ ಎಂಬುದರ ಕುರಿತೂ ಅವರು ಮಾಹಿತಿ ನೀಡಿಲ್ಲ.
ಕೇಂದ್ರ ಸರಕಾರ ನಿಜವಾಗಿಯೂ ಶೇ 85ರಷ್ಟು ಟಿಕೆಟ್ ವೆಚ್ಚ ಭರಿಸುತ್ತಿದೆಯೇ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಸಾಲಿಸಿಟರ್ ಜನರಲ್ ಮೇಲಿನಂತೆ ಹೇಳಿದ್ದಾರೆ.
ವಲಸಿಗ ಕಾರ್ಮಿಕರಿಂದ ಟಿಕೆಟ್ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಕುರಿತಂತೆ ವಿಪಕ್ಷಗಳು ಈಗಾಗಲೇ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರೆ ಸರಕಾರ ಮಾತ್ರ ಈ ಕುರಿತಂತೆ ಇನ್ನೂ ಏನೂ ಹೇಳಿಲ್ಲ.
ವಲಸೆ ಕಾರ್ಮಿಕರು ತಮ್ಮ ರೈಲು ಪ್ರಯಾಣದ ವೆಚ್ಚವನ್ನು ಭರಿಸುವ ಕುರಿತು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಗೌಪ್ಯತೆ ಕಾಯ್ದುಕೊಂಡಿರುವುದು ಗಮನಾರ್ಹವಾಗಿದೆ. ದುಡಿಮೆ ಇಲ್ಲದ ಹಿನ್ನೆ ತಮ್ಮ ಊರುಗಳಿಗೆ ಹಿಂತಿರುಗುತ್ತಿರುವ ವಲಸೆ ಕಾರ್ಮಿಕರಿಂದ ಕೇಂದ್ರ ಸರಕಾರವು ರೈಲು ಪ್ರಯಾಣ ಶುಲ್ಕವನ್ನು ವಸೂಲಿ ಮಾಡುತ್ತಿರುವುದರ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಮೋದಿ ಸರಕಾರವು ವಿಶೇಷ ರೈಲು ಓಡಿಸಲು ಸಮ್ಮತಿ ವ್ಯಕ್ತಪಡಿಸಿತ್ತು. ಆದರೆ ಕಾರ್ಮಿಕರಿಂದ ಸಾಮಾನ್ಯ ಶುಲ್ಕಕ್ಕಿಂತಲೂ ಅಧಿಕ ದರವನ್ನು ವಿಧಿಸಿದ್ದಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಕೇಂದ್ರ ಸರಕಾರವು ಕಾರ್ಮಿಕರ ಟಿಕೆಟ್ ವೆಚ್ಚದ ಶೇ.85ರಷ್ಟು ವಹಿಸಿಕೊಳ್ಳಲಿದೆ ಎಂದು ಹೇಳಿದ್ದರು.
ಆದಾಗ್ಯೂ ಆನಂತರ ಅಗರ್ವಾಲ್ ಹೇಳಿರುವುದು ಕೇಂದ್ರ ಸರಕಾರವು ವಿಶೇಷ ರೈಲುಗಳಿಗೆ ಶೇ.85ರಷ್ಟು ಸಬ್ಸಿಡಿಯನ್ನು ಘೋಷಿಸಿರುವ ಕುರಿತಾಗಿದೆ ಹಾಗೂ ವಲಸೆ ಕಾರ್ಮಿಕರ ಟಿಕೆಟ್ ದರದಲ್ಲಿ ಯಾವುದೇ ನೇರ ರಿಯಾಯಿತಿಯನ್ನು ಅದು ನೀಡಿಲ್ಲ. ಅವರು ತಮ್ಮ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗಿದೆ ಎಂಬುದು ಸ್ಪಷ್ಟವಾಗಿತ್ತು.