ಮನೆಗೆ ಮರಳಲು ಸಿಗದ ರೈಲು, ವಲಸಿಗ ಕಾರ್ಮಿಕರ ಮೃತದೇಹ ವಿಶೇಷ ರೈಲಿನಲ್ಲಿ ಊರಿಗೆ !
Update: 2020-05-10 10:08 IST
ಔರಂಗಾಬಾದ್, ಮೇ.10: ಮೇ 8 ರಂದು ಸರಕು ರೈಲೊಂದು ಮೈಮೇಲೆ ಹರಿದು ಸಾವಿಗೀಡಾದ 16 ಮಂದಿ ವಲಸಿಗ ಕಾರ್ಮಿಕರ ಪಾರ್ಥಿವ ಶರೀರಗಳನ್ನು ಶನಿವಾರ ವಿಶೇಷ ರೈಲೊಂದರ ಮೂಲಕ ಮಧ್ಯಪ್ರದೇಶಕ್ಕೆ ಕಳಿಸಲಾಯಿತು. ಅದೇ ರೈಲಿನಲ್ಲಿ ಮಧ್ಯಪ್ರದೇಶಕ್ಕೆ ವಾಪಸಾಗುವ ಇತರ ವಲಸಿಗ ಕಾರ್ಮಿಕರೂ ಇದ್ದರು.
ಮಹಾರಾಷ್ಟ್ರದ ಜಲ್ನಾದಿಂದ ಮಧ್ಯಪ್ರದೇಶಕ್ಕೆ ನಡೆದುಕೊಂಡೇ ಹೋಗುತ್ತಿದ್ದ ವಲಸಿಗ ಕಾರ್ಮಿಕರು ಶುಕ್ರವಾರ ಸುಮಾರು 36 ಕಿಮೀ ನಡೆದ ಮೇಲೆ ಸುಸ್ತಾಗಿ ಔರಂಗಾಬಾದ್ ಜಿಲ್ಲೆಯ ಕರ್ಮಡ್ ಎಂಬ ಪ್ರದೇಶದಲ್ಲಿ ರೈಲ್ವೆ ಹಳಿಗಳ ಮೇಲೆ ನಿದ್ರೆಗೆ ಜಾರಿದ್ದರು. ಆಗ ಆ ದಾರಿಯಲ್ಲಿ ಬಂದ ಸರಕು ಸಾಗಾಟ ರೈಲೊಂದು ಅವರ ಮೇಲೆ ಹರಿದು 16 ಮಂದಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರಿಗೆ ಔರಂಗಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.