ಅಂತ್ಯಸಂಸ್ಕಾರಕ್ಕೆ ನಿರಾಕರಿಸುವುದು ಎಷ್ಟು ಸರಿ!

Update: 2020-05-26 17:15 GMT

ಭಾರತದಲ್ಲಿ ನೆಲೆಯೂರಿರುವ ಜಾತಿ ವ್ಯವಸ್ಥೆಯಿಂದಾಗಿ ಒಂದು ಪದರದ ಜನ ಅಸ್ಪಶ್ಯರಾಗಿ ಮತ್ತೊಂದು ಪದರದ ಜನ ಸ್ಪಶ್ಯರಾಗಿ ವಿಂಗಡನೆಯಾಗಿರುವುದು ಇತಿಹಾಸದಲ್ಲಿ ದಾಖಲಾಗಿದೆ. ನೊಂದ ಜನರಿಗೆ ಎಲ್ಲಾ ಸವಲತ್ತುಗಳನ್ನು ಶತಮಾನಗಳ ಕಾಲದಿಂದಲೂ ವಂಚಿಸುತ್ತಾ ಬಂದಿದ್ದಾರೆ. ಇಂತಹ ಸವಲತ್ತುಗಳು ಮರಣದ ನಂತರ ಅವರ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡದೆ ಇರುವುದು ಒಂದು ಅಂಗವಾಗಿ ಕಾಡುತ್ತಿರುವುದು ಒಂದು ದುರದೃಷ್ಟಕರ ಸಂಗತಿ. ಈ ದುರದೃಷ್ಟತೆಯನ್ನು ಹೋಗಲಾಡಿಸಲು ಸರಕಾರಗಳು ಒಂದೊಂದು ಜಾತಿಯ ಪಂಗಡಗಳಿಗೆ ಅವರದ್ದೇ ಸಂಸ್ಕೃತಿಗೆ ತಕ್ಕಂತೆ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನವನ್ನು ನಿಗದಿಪಡಿಸಿದ್ದಾರೆ. ಈ ಆಧಾರದಲ್ಲೇ ಮೈಸೂರು ನಗರದ ವಿಶ್ವೇಶ್ವರನಗರದ ಸಂತ ಥಾಮಸ್ ಶಾಲೆಯ ಎದುರು ಇರುವ ಸ್ಮಶಾನವು ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದ್ದು ಯಾರೇ ಪರಿಶಿಷ್ಟ ಜಾತಿಯವರು ಮರಣ ಹೊಂದಿದರೆ ಅವರ ಅಂತ್ಯ ಸಂಸ್ಕಾರ ಮಾಡಲು ಈ ಸ್ಮಶಾನವು ಮೀಸಲಾಗಿದೆ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುತ್ತದೆ.

ಹೀಗೆ ಕೆಲವು ದಿನಗಳಿಂದ ಇದೇ ಅಶೋಕಪುರಂನಲ್ಲಿ ಹುಟ್ಟಿ ಬೇರೆ ಕಡೆ ನೆಲೆಸಿದ್ದ ಪರಿಶಿಷ್ಟರೊಬ್ಬರು ಮೃತಪಟ್ಟಿದ್ದು ಮೃತ ದೇಹವನ್ನು ಈ ಸ್ಮಶಾನದಲ್ಲಿ ಹೂಳಲು ಅಲ್ಲಿ ಕರ್ತವ್ಯ ನಿರ್ವಹಿಸುವ ಪಾಲಿಕೆಯ ಸಿಬ್ಬಂದಿಯ ಅನುಮತಿಯನ್ನು ಕೋರಿದ್ದಾರೆ. ಇದಕ್ಕೆ ಆ ಸಿಬ್ಬಂದಿ ನಿರಾಕರಿಸಿ ಅವರು ಅಶೋಕಪುರಂ ನಿವಾಸಿಯಾಗಿರುವುದಿಲ್ಲ. ಅಲ್ಲಿಯ ನಿವಾಸಿಯಾಗಿದ್ದರೆ ಮಾತ್ರ ಈ ಸ್ಮಶಾನದಲ್ಲಿ ಹೂಳಲು ಅವಕಾಶವೆಂದು ತಿಳಿಸಿ ಬೇರೆ ಕಡೆಗೆ ಕಳುಹಿಸಿರುವುದು ನಿಜಕ್ಕೂ ಸಾಮಾಜಿಕವಾಗಿ ಮಾನವೀಯ ಮೌಲ್ಯಕ್ಕೆ ಅಪಮಾನ ಮಾಡಿದಂತಾಗಿದೆ. ಹಾಗಾದರೆ, ಅಶೋಕಪುರಂನಲ್ಲಿ ಹುಟ್ಟಿ ಬೇರೆ ಕಡೆ ನೆಲೆಸಲೇಬಾರದೇ?. ಈ ಸ್ಮಶಾನವು ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದೆ ಎಂದಾದ ಮೇಲೆ ಬೇರೆ-ಬೇರೆ ಪ್ರದೇಶದಲ್ಲಿ ನೆಲೆಸಿರುವ ಎಲ್ಲಾ ಪರಿಶಿಷ್ಟರಿಗೆ ಈ ಸ್ಮಶಾನವು ಹಕ್ಕು ಸ್ವಾಮ್ಯವುಳ್ಳದ್ದಾಗಿರುತ್ತದೆ. ಆದರೆ, ಈ ಸರಕಾರದ ಸ್ಮಶಾನ ಜಾಗದಲ್ಲಿ ಮೊದಲೇ ತಾರತಮ್ಯದಿಂದ ನಲುಗಿರುವ ಪರಿಶಿಷ್ಟರ ಹಕ್ಕಿನ ಮೇಲೆ ಮತ್ತಷ್ಟು ಘಾಸಿಗೊಳಿಸಿದಂತಾಗಿದೆ. 

Writer - ಪುನೀತ್ ಎನ್., ಮೈಸೂರು

contributor

Editor - ಪುನೀತ್ ಎನ್., ಮೈಸೂರು

contributor

Similar News