ಹಸಿವಿನಿಂದ ದಣಿದು ಮೃತಪಟ್ಟ ಅಮ್ಮನನ್ನು ಎಬ್ಬಿಸಲು ಕಂದಮ್ಮನ ಪ್ರಯತ್ನ

Update: 2020-05-27 08:45 GMT

ಪಾಟ್ನಾ : ಬಿಹಾರದ ಮುಝಫ್ಫರಪುರ್  ರೈಲ್ವೆ ನಿಲ್ದಾಣದಲ್ಲಿ  ಪುಟ್ಟ ಮಗುವೊಂದು ಯಾವುದರ ಪರಿವೆಯೇ ಇಲ್ಲದೆ ತನ್ನ ಅಮ್ಮ ಸತ್ತಿದ್ದಾಳೆಂದೂ ತಿಳಿಯದೆ ಆಕೆಯ ಮೈಮೇಲೆ ಹಾಕಲಾಗಿದ್ದ ಚಾದರವನ್ನು ಎಳೆಯುತ್ತಾ ಆಕೆಯನ್ನು ಎಬ್ಬಿಸಲು ಯತ್ನಿಸುತ್ತಿರುವ ಮನಕಲಕುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

ದೇಶಾದ್ಯಂತ ಲಾಕ್‍ ಡೌನ್‍ನಿಂದ ಅತಂತ್ರರಾಗಿರುವ ವಲಸಿಗ ಕಾರ್ಮಿಕರ ದುಸ್ಥಿತಿಯನ್ನು ಮಗು ಹಾಗೂ  ತಾಯಿಯ ಚಿತ್ರ ಬಿಂಬಿಸುತ್ತದೆ.

ಮಗು ತಾಯಿಯ ಚಾದರೊಂದಿಗೆ ಆಟವಾಡುತ್ತಾ ಇರುವಾಗ ಆಕೆ ಅಲುಗಾಡುವುದಿಲ್ಲ, ಬಿಸಿಲಿನ ಧಗೆ,  ಹಸಿವಿನಿಂದ ಆಕೆ ಅದಾಗಲೇ ಕೆಲವೇ ಕ್ಷಣಗಳ ಹಿಂದೆ ಸಾವನ್ನಪ್ಪಿದ್ದಾಳೆಂದು ತಿಳಿದು ಬಂದಿದೆ.

ಶನಿವಾರ ಗುಜರಾತ್ ರಾಜ್ಯದಲ್ಲಿ ರೈಲು ಹತ್ತಿದ್ದ ಆಕೆ ಹಸಿವು ಹಾಗೂ ನೀರಡಿಕೆಯಿಂದ ಬಳಲಿ ಬೆಂಡಾಗಿದ್ದಳೆಂದು ಕುಟುಂಬ ಸದಸ್ಯರು ಹೇಳುತ್ತಾರೆ.  ಸೋಮವಾರ ರೈಲು ಮುಝಫ್ಫರಪುರ್ ನಿಲ್ದಾಣ ಇನ್ನೇನು ತಲುಪಬೇಕೆನ್ನುವಷ್ಟರಲ್ಲಿ ಕುಸಿದು ಬಿದ್ದಿದ್ದಾಳೆ. ನಂತರ  ಆಕೆಯ ಮೃತದೇಹವನ್ನು ಹಾಗೆಯೇ ಪ್ಲಾಟ್‍ಫಾರ್ಮ್‍ನಲ್ಲಿರಿಸಲಾಗಿತ್ತು. ಆಕೆಯ ಪುಟ್ಟ ಕಂದಮ್ಮ ಆಕೆಯನ್ನು ಎಬ್ಬಿಸಲು ನಡೆಸುತ್ತಿರುವ ಯತ್ನ ಕಣ್ಣೀರು ತರಿಸುವಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News