ಲಾಕ್‌ಡೌನ್ ಸಮಯದಲ್ಲಿ ರೈಲ್ವೆ ಸರಕು ಸಾಗಣೆ ಆದಾಯದಲ್ಲಿ 8,283 ಕೋ.ರೂ.ನಷ್ಟ

Update: 2020-06-04 10:33 GMT

ಹೊಸದಿಲ್ಲಿ, ಜೂ.4: ಕರೋನ ವೈರಸ್‌ನಿಂದ ಏಕಾಏಕಿ ಎರಡು ತಿಂಗಳ ಕಾಲ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರಕು ಸಾಗಣೆ ಆದಾಯದಲ್ಲಿ 8,283 ಕೋ.ರೂ. ನಷ್ಟ ಅನುಭವಿಸಿದೆ.

ಎಪ್ರಿಲ್ ಹಾಗೂ ಮೇ ತಿಂಗಳ ಪ್ರಯಾಣಿಕರ ಗಳಿಕೆಯ ಕೊರತೆಯು ಮೇ ಅಂತ್ಯದ ವೇಳೆಗೆ ಸುಮಾರು 9,000 ಕೋ.ರೂ.ಗಳಾಷ್ಟಗಬಹುದು ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಮಾರ್ಚ್ ಅಂತ್ಯಕ್ಕೆ ಸ್ಥಗಿತಗೊಳಿಸಲಾಗಿತ್ತು. ಮೇ 12ರಿಂದ ಶ್ರಮಿಕ್ ರೈಲುಗಳಲ್ಲದೆ ಕೆಲವು ಮೊಟಕುಗೊಂಡ ಸೇವೆಯನ್ನು ಪುನರಾರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News