ಕೋವಿಡ್ -19: ದಿಲ್ಲಿಯ ಮಾಜಿ ಆಲ್‌ರೌಂಡರ್ ಬಲಿ

Update: 2020-06-29 17:55 GMT

ಹೊಸದಿಲ್ಲಿ, ಜೂ.29: ಕೊರೋನ ವೈರಸ್ ಸೋಂಕಿನಿಂದ ಹೆಚ್ಚುತ್ತಿರುವ ತೊಂದರೆಗಳಿಂದಾಗಿ ದಿಲ್ಲಿಯ ಮಾಜಿ ಆಲ್‌ರೌಂಡರ್ ಸಂಜಯ್ ದೋಬಲ್ ಸೋಮವಾರ ಬೆಳಿಗ್ಗೆ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.

 ದೋಬಲ್ ಏರ್ ಇಂಡಿಯಾದಲ್ಲಿ ಉದ್ಯೋಗದಲ್ಲಿದ್ದರು ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸ್ವಭಾವಕ್ಕೆ ಹೆಸರಾಗಿದ್ದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಪರಿಣಾಮಕಾರಿಯಾದ ಆಫ್-ಸ್ಪಿನ್ನರ್ ಆಗಿದ್ದ ಅವರು ತನ್ನ ಪ್ರಯತ್ನದ ಮೂಲಕ ಪಂದ್ಯವನ್ನು ಗೆಲ್ಲಿಸಿ ಕೊಡುತ್ತಿದ್ದರು’’ಎಂದು ಅವರ ಕೋಚ್ ತಾರಕ್ ಸಿನ್ಹಾ ನೆನಪಿಸಿಕೊಂಡರು.

   ದಿಲ್ಲಿಯ ಬ್ಯಾಟ್ಸ್‌ಮನ್ ಮಿಥುನ್ ಮನ್ಹಾಸ್ ಅವರಿಗೆ ದೋಬಲ್ ಅವರೊಂದಿಗಿನ ಒಡನಾಟ ದೀರ್ಘವಾಗಿತ್ತು.‘‘ ಅವರು ಆಟಗಾರರಾಗಿ ವೃತ್ತಿಬದುಕು ಆರಂಭಿಸಿದರು ನಂತರ ಏರ್ ಇಂಡಿಯಾದಲ್ಲಿ ಉತ್ತಮ ಕೋಚ್ ಆದರು. ಅವರು ಫಿಟ್‌ನೆಸ್‌ಗೆ ಹೆಸರುವಾಸಿಯಾಗಿದ್ದರು. ದ್ವಾರಕಾದಲ್ಲಿರುವ ಅವರ ಅಕಾಡಮಿಯಲ್ಲಿ ಕ್ರಿಕೆಟ್ ಕೌಶಲ್ಯದ ಮೊದಲು ಫಿಟ್‌ನೆಸ್ ಬಗ್ಗೆ ಗಮನ ಹರಿಸಬೇಕೆಂದು ತಮ್ಮ ತರಬೇತುದಾರರನ್ನು ಒತ್ತಾಯಿಸಿದರು’’ಎಂದು ಮನ್ಹಾಸ್ ನೆನಪಿಸಿಕೊಂಡರು.

 ಸಂಜಯ್ ದೋಬಲ್‌ಗೆ ಆರಂಭದಲ್ಲಿ ಕೊರೋನ ಸೋಂಕು ತಗಲಿರುವುದು ಗೊತ್ತಾಗಲಿಲ್ಲ. ಅದಕ್ಕೆ ಕೆಲವು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ದೋಬಲ್ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹಿರಿಯ ಪುತ್ರ ಸಿದ್ಧಾಂತ್ ರಾಜಸ್ಥಾನದ ರಣಜಿ ಟ್ರೋಫಿ ಆಟಗಾರರಾಗಿದ್ದಾರೆ. ಕಿರಿಯ ಪುತ್ರ ಏಕಾಂಶು 23 ವರ್ಷದೊಳಗಿನ ತಂಡದ ಆಟಗಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News