ಮೋದಿ ಆಡಳಿತಾವಧಿಯಲ್ಲಿ ಚೀನಾದಿಂದ ಆಮದು ಗಣನೀಯ ಏರಿಕೆ: ಅಂಕಿ ಅಂಶ ಟ್ವೀಟ್ ಮಾಡಿದ ರಾಹುಲ್

Update: 2020-06-30 10:24 GMT

ಹೊಸದಿಲ್ಲಿ : ಕೇಂದ್ರದ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ವ್ಯಂಗ್ಯವಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದಕ್ಕೆ ಪೂರಕವೆಂಬಂತೆ ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಚೀನಾದಿಂದ ಮಾಡಲಾಗುವ ಆಮದು ಬಹಳಷ್ಟು ಏರಿಕೆಯಾಗಿದೆಯೆಂಬುದನ್ನು ತಿಳಿಸುವ ಅಂಕಿ ಅಂಶಗಳನ್ನೂ ಪ್ರಸ್ತುತ ಪಡಿಸಿದ್ದಾರೆ.

2014ರಲ್ಲಿ ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಳಿಕ ಚೀನಾದಿಂದ ಉತ್ಪನ್ನಗಳ ಆಮದು ಮಾಡಿಕೊಳ್ಳುವುದು ಹೆಚ್ಚಾಗಿದೆ ಎಂದು ತಮ್ಮ ವಾದದಲ್ಲಿ ಉಲ್ಲೇಖಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಬಿಜೆಪಿ ನೇತೃತ್ವದ ಹಾಲಿ ಎನ್ ‌ಡಿಎ ಸರಕಾರಗಳ ಅವಧಿಯಲ್ಲಿ ಚೀನಾದಿಂದ ಮಾಡಿಕೊಂಡಿರುವ ಉತ್ಪನ್ನಗಳ ಆಮದನ್ನು ಹೋಲಿಕೆ ಮಾಡಿ ರಾಹುಲ್ ಟ್ವೀಟ್ ಮಾಡಿದ್ದಾರೆ. "ಸತ್ಯಗಳು ಸುಳ್ಳಾಗುವುದಿಲ್ಲ. ಬಿಜೆಪಿ ಹೇಳುತ್ತದೆ: 'ಮೇಕ್ ಇನ್ ಇಂಡಿಯಾ'. ಬಿಜೆಪಿ ಮಾಡುತ್ತಿರುವುದು: ಚೀನಾದಿಂದ ಖರೀದಿ'' ಎಂದು ಟ್ವಿಟರ್‌ನಲ್ಲಿ ರಾಹುಲ್ ಬರೆದಿದ್ದಾರೆ.

 ಕಾಂಗ್ರೆಸ್ ನಾಯಕ ಹಂಚಿಕೊಂಡಿರುವ ಗ್ರಾಫ್‌ನಲ್ಲಿ 2008ರಿಂದ 2014ರ ನಡುವೆ ಭಾರತವು ಚೀನಾದಿಂದ ಶೇ.14ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಉತ್ಪನ್ನಗಳ ಪ್ರಮಾಣ ಶೇ.18ಕ್ಕೆ ಹೆಚ್ಚಳವಾಗಿದೆ ಎಂದು ತೋರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News