ನಾಗಾಲ್ಯಾಂಡ್‌ನಲ್ಲಿ ನಾಯಿಮಾಂಸ ಮಾರಾಟ ನಿಷೇಧ

Update: 2020-07-03 15:01 GMT

ಕೊಹಿಮಾ,ಜು.16: ನಾಗಾಲ್ಯಾಂಡ್‌ನಲ್ಲಿ ನಾಯಿ ಮಾಂಸದ ಮಾರಾಟವನ್ನು ನಿಷೇಧಿಸಿರುವುದಾಗಿ ಅಲ್ಲಿನ ರಾಜ್ಯಸರಕಾರವು ಶುಕ್ರವಾರ ಘೋಷಿಸಿದೆ.

ನಾಗಾಲ್ಯಾಂಡ್‌ನ ದಿಮಾಪುರ ನಗರದ ಮಾರುಕಟ್ಟೆಯೊಂದರಲ್ಲಿ ಮಾಂಸಕ್ಕಾಗಿ ಮಾರಾಟಕ್ಕಿಡಲಾದ ನಾಯಿಗಳನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ನಾಗಾಲ್ಯಾಂಡ್ ಸರಕಾರ ಈ ಆದೇಶ ಹೊರಡಿಸಿದೆ.

  ‘‘ನಾಗಾಲ್ಯಾಂಡ್ ರಾಜ್ಯ ಸರಕಾರವು ನಾಯಿಗಳ ವಾಣಿಜ್ಯಾತ್ಮಕ ಆಮದು ಹಾಗೂ ವ್ಯಾಪಾರವನ್ನು ನಿಷೇಧಿಸಿಲು ನಿರ್ಧರಿಸಿದೆ. ನಾಯಿ ಮಾಂಸದ ಖಾದ್ಯವನ್ನಾಗಲಿ, ಅಥವಾ ಹಸಿ ನಾಯಿಮಾಂಸದ ಮಾರಾಟವನ್ನು ಕೂಡಾ ನಿಷೇಧಿಸಿದೆ’’ ಎಂದು ನಾಗಾಲ್ಯಾಂಡ್ ಸರಕಾರದ ಮುಖ್ಯ ಕಾರ್ಯದರ್ಶಿ ಟೆಮೆಜೆನ್ ಟಾಯ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

 ದಿಮಾಪುರ ಮಾರುಕಟ್ಟೆಯಲ್ಲಿ, ಬಾಯಿಗೆ ಹಗ್ಗದಿಂದ ಕಟ್ಟಿ, ಗೋಣಿ ಚೀಲದೊಳಗೆ ತುರುಕಿಸಿಡಲಾಗಿದ್ದ ನಾಯಿಗಳ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದಾಗ ವ್ಯಾಪಕ ಆಕ್ರೋಶ ಉಂಟಾಗಿತ್ತು. ಈ ನಾಯಿಗಳನ್ನು ಮಾಂಸಕ್ಕಾಗಿ ಮಾರಾಟ ಮಾಡಲು ಜೂನ್ 26ರಂದು ಪಶ್ಚಿಮಬಂಗಾಳದಿಂದ ನಾಗಾಲ್ಯಾಂಡ್‌ಗೆ ತರಲಾಗಿತ್ತೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News