×
Ad

ಗ್ರಾಹಕರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿ ದರ ಸತತ 4ನೇ ದಿನ ಇಳಿಕೆ

Update: 2020-08-24 13:33 IST

ಹೊಸದಿಲ್ಲಿ: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಸೋಮವಾರ ಸತತ ನಾಲ್ಕನೇ ದಿನ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಗಳ ಸ್ಥಿತಿಗತಿಯು ಚಿನ್ನ, ಬೆಳ್ಳಿ ಬೆಲೆ ಇಳಿಕೆಗೆ ಕಾರಣವಾಗಿದೆ.

ಚಿನ್ನದ ಬೆಲೆ ಕಳೆದ ನಾಲ್ಕು ದಿನಗಳಲ್ಲಿ 10 ಗ್ರಾಂಗೆ ಸುಮಾರು ರೂ 1,700ರಷ್ಟು ಇಳಿಕೆ ಕಂಡು ಒಟ್ಟಾರೆ ಶೇ0.3ರಷ್ಟು ಇಳಿಕೆಯಾಗಿದೆ. ಸದ್ಯ ಚಿನ್ನದ ಬೆಲೆ ಆಗಸ್ಟ್ 7ಕ್ಕೆ ಹೋಲಿಸಿದರೆ 10 ಗ್ರಾಂಗೆ 4,300 ರೂ.ಗಳಷ್ಟು ಕಡಿಮೆಯಾಗಿದೆ. ಆಗಸ್ಟ್ 7ರಲ್ಲಿ ಗರಿಷ್ಠ ರೂ 56,200 ಬೆಲೆ ದಾಖಲಾಗಿತ್ತು. ಸದ್ಯ 10 ಗ್ರಾಂ ಚಿನ್ನದ ಬೆಲೆ 51, 865 ರೂ. ಆಗಿದೆ.

ಮತ್ತೆ ಏನಾದರೂ ಪ್ರಮುಖ ಕಾರಣವಿಲ್ಲದೇ ಇದ್ದಲ್ಲಿ ಚಿನ್ನದ ಬೆಲೆ ಇದೇ ರೀತಿ ಇಳಿಕೆಯಾಗಬಹುದು, ಜತೆಗೆ ದರ ಇಳಿಕೆಯ ಬೆನ್ನಲ್ಲೇ ಜನರ ಚಿನ್ನದ ಖರೀದಿಯಲ್ಲಿ ಸುಧಾರಣೆ ಕಾಣಬಹುದು ಎಂದು ಕೋಟಕ್ ಸೆಕ್ಯುರಿಟೀಸ್ ಅಭಿಪ್ರಾಯ ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News