ಬಾರ್ಸಿಲೋನ ಫುಟ್ಬಾಲ್ ಕ್ಲಬ್ ತ್ಯಜಿಸುವ ಇಚ್ಛೆ ವ್ಯಕ್ತಪಡಿಸಿದ ಮೆಸ್ಸಿ

Update: 2020-08-26 18:09 GMT

ಬಾರ್ಸಿಲೋನ(ಸ್ಪೇನ್), ಆ.26: ತಾನು ತಕ್ಷಣವೇ ಫುಟ್ಬಾಲ್ ಕ್ಲಬ್‌ನ್ನು ತ್ಯಜಿಸಲು ಬಯಸಿದ್ದೇನೆ ಎಂದು ನಾಯಕ ಲಿಯೊನೆಲ್ ಮೆಸ್ಸಿ ಬಾರ್ಸಿಲೋನಕ್ಕೆ ತಿಳಿಸಿದ್ದಾರೆ ಎಂದು ಮಂಗಳವಾರ ಮೂಲಗಳು ದೃಢಪಡಿಸಿವೆ. ಬೇಯರ್ನ್ ಮ್ಯೂನಿಕ್ ವಿರುದ್ಧ ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್‌ನಲ್ಲಿ 2-8 ಅಂತರದಿಂದ ಹೀನಾಯವಾಗಿ ಸೋತ ಎರಡು ವಾರದೊಳಗೆ ಬಾರ್ಸಿಲೋನ ತಂಡದೊಳಗೆ ಪ್ರಕ್ಷುಬ್ಧ್ದತೆ ಹೆಚ್ಚಾಗಿದೆ. ಮೆಸ್ಸಿ ಅವರ ವೃತ್ತಿಜೀವನದಲ್ಲಿ ಹಾಗೂ ಕ್ಲಬ್ ಇತಿಹಾಸದಲ್ಲಿ ಇದು ಅತ್ಯಂತ ಹೀನಾಯ ಸೋಲು ಎಂದು ವಿಶ್ಲೇಷಿಸಲಾಗಿತ್ತು. ಈ ಸೋಲು ಬಾರ್ಸಿಲೋನ ಕ್ಲಬ್‌ನ ಅತ್ಯಂತ ಕಠಿಣ ಋತುವಾಗಿ ಪರಿವರ್ತನೆಯಾಗಲು ಕಾರಣವಾಗಿದ್ದು, 2007-08ರ ಬಳಿಕ ಇದೇ ಮೊದಲ ಬಾರಿ ಇಡೀ ವರ್ಷದಲ್ಲಿ ಯಾವ ಪ್ರಶಸ್ತಿಯನ್ನು ಗೆದ್ದಿಲ್ಲ. ಇದು ತಂಡದಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ತನ್ನ ಇಡೀ ವೃತ್ತಿಜೀವನವನ್ನು ಬಾರ್ಸಿಲೋನ ಫುಟ್ಬಾಲ್ ಕ್ಲಬ್‌ನಲ್ಲೇ ಕಳೆದಿರುವ ಸ್ಪೇನ್‌ನ ಫುಟ್ಬಾಲ್ ದಿಗ್ಗಜ ಮೆಸ್ಸಿ ಬರೋಫ್ಯಾಕ್ಸ್‌ನ್ನು ಕಳುಹಿಸುವ ಮೂಲಕ ಕ್ಲಬ್‌ನ್ನು ತ್ಯಜಿಸುವ ಬಯಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕ್ಲಬ್ ಮೂಲಗಳು ತಿಳಿಸಿವೆ. ಆರು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ಜಯಿಸಿರುವ ಮೆಸ್ಸಿ ವಿಶ್ವದ ಸರ್ವಶ್ರೇಷ್ಠ ಆಟಗಾರ. ಬಾರ್ಸಿಲೋನ ಫುಟ್ಬಾಲ್ ಕ್ಲಬ್ 10 ಬಾರಿ ಸ್ಪಾನಿಶ್ ಲೀಗ್ ಪ್ರಶಸ್ತಿಗಳನ್ನು ಹಾಗೂ ನಾಲ್ಕು ಚಾಂಪಿಯನ್ಸ್ ಲೀಗ್ ಕಿರೀಟ ಗೆಲ್ಲಲು ತಂಡಕ್ಕೆ ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News