ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕ ಸಿಂಗ್ ವಿರುದ್ಧ ದೂರು ದಾಖಲಿಸಿದ ರಿಯಾ

Update: 2020-09-07 14:30 GMT

ಮುಂಬೈ, ಸೆ. 6: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಹಲವು ತನಿಖೆಗಳನ್ನು ಎದುರಿಸುತ್ತಿರುವ ರಿಯಾ ಚಕ್ರವರ್ತಿ ಅವರು ನಟನ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ಮುಂಬೈ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಪ್ರಿಯಾಂಕಾ ತನ್ನ ಸಹೋದರ ಸುಖಾಂತ್ ಸಿಂಗ್ ರಜಪೂತ್‌ಗೆ ನಕಲಿ ವೈದ್ಯಕೀಯ ಶಿಫಾರಸನ್ನು ಕಳುಹಿಸಿದ್ದಾರೆ ಎಂದು ರಿಯಾ ಚಕ್ರವರ್ತಿ ದೂರಿನಲ್ಲಿ ಆರೋಪಿಸಿದ್ದಾರೆ. ದೂರಿನಲ್ಲಿ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯ ಡಾ. ತರುಣ್ ಕುಮಾರ್ ಅವರ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್‌ಗೆ ನೀಡಲಾದ ವೈದ್ಯಕೀಯ ಶಿಫಾರಸು ನಕಲಿ ಹಾಗೂ ತಿರುಚಿದಂತೆ ಕಾಣುತ್ತದೆ ಎಂದು ರಿಯಾ ಚಕ್ರವರ್ತಿ ದೂರಿನಲ್ಲಿ ತಿಳಿಸಿದ್ದಾರೆ.

 ಈ ಕಾನೂನು ಬಾಹಿರ ವೈದ್ಯಕೀಯ ಶಿಫಾರಸನ್ನು ಸ್ವೀಕರಿಸಿದ ದಿನದ ಬಳಿಕ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ್ದಾರೆ ಎಂದು ದೂರಿನಲ್ಲಿ ಅವರು ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಇಂತಹ ನಕಲಿ ಹಾಗೂ ಕಾನೂನು ಬಾಹಿರ ಶಿಫಾರಸು ನೀಡಿದ ಪ್ರಿಯಾಂಕಾ ಹಾಗೂ ವೈದ್ಯ ಕುಮಾರ್ ಕುರಿತು ತನಿಖೆ ನಡೆಸುವಂತೆ ಅವರು ಮುಂಬೈ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಜೂನ್ 8ರಂದು ಸುಶಾಂತ್ ಹಾಗೂ ಅವರ ಸಹೋದರಿ ನಡುವೆ ನಡೆದ ವ್ಯಾಟ್ಸ್ ಆ್ಯಪ್ ಆಧಾರದಲ್ಲಿ ರಿಯಾ ದೂರು ದಾಖಲಿಸಿದ್ದಾರೆ. ಮಾದಕ ದ್ರವ್ಯಕ್ಕಾಗಿ ಈ ನಕಲಿ ಶಿಫಾರಸು ನೀಡಲಾಗಿದೆ ಎಂದು ರಿಯಾ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News