ತಮಿಳುನಾಡು: ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿದ ಕಿಡಿಗೇಡಿಗಳು

Update: 2020-09-27 11:03 GMT

Photo: Twitter (@KanimozhiDMK)
 

ತಿರುಚಿರಾಪಳ್ಳಿ ಸೆ.27: ಸುಧಾರಣಾವಾದಿ ನಾಯಕ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ ಪ್ರತಿಮೆಗೆ ರವಿವಾರ ಅಪರಿಚಿತರು ಕೇಸರಿ ಬಣ್ಣ ಬಳಿದಿರುವುದು ಕಂಡುಬಂದಿದ್ದು, ಕಿಡಿಗೇಡಿಗಳ ಈ ಕುಕೃತ್ಯಕ್ಕೆ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಸೇರಿದಂತೆ ತಮಿಳುನಾಡಿನ ರಾಜಕೀಯ ಮುಖಂಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ರವಿವಾರ ಮುಂಜಾನೆ ಇನಮ್ಕುಲಥೂರ್‌ನ ಸಮತುವಪುರಂ ಕಾಲನಿಯಲ್ಲಿರುವ ಪ್ರತಿಮೆಯ ಬಳಿ ಚಪ್ಪಲಿ ಪತ್ತೆಯಾಗಿದೆ. ಪ್ರತಿಮೆಯನ್ನು ಧ್ವಂಸಗೊಳಿಸಿರುವ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಎರಡನೇ ಬಾರಿ ಈ ಘಟನೆ ನಡೆದಿದೆ.

ಕುಕೃತ್ಯವನ್ನು ಖಂಡಿಸಿ ಸ್ಥಳೀಯರು ದಿಂಡಿಗಲ್ ಹೆದ್ದಾರಿಯಲ್ಲಿ ಸ್ವಲ್ಪ ಸಮಯದವರಿಗೆ ಸಂಚಾರವನ್ನು ತಡೆದಿದ್ದು, ವಿದ್ವಂಸಕ ಕೃತ್ಯ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಗುಂಪು ಚದುರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News