ಬಾಬರಿ ಮಸೀದಿ ದ್ವಂಸ ಪ್ರಕರಣ: ಕೋರ್ಟ್ ತೀರ್ಪಿನ ಬಗ್ಗೆ ಅಡ್ವಾಣಿ ಪ್ರತಿಕ್ರಿಯೆ

Update: 2020-09-30 08:42 GMT

ಹೊಸದಿಲ್ಲಿ,ಸೆ.29: ನ್ಯಾಯಾಲಯದ ಇಂದಿನ ತೀರ್ಪು ರಾಮಜನ್ಮ ಭೂಮಿ ಚಳವಳಿಯ ಕುರಿತು ತನ್ನ ಹಾಗೂ ಬಿಜೆಪಿಯ ನಂಬಿಕೆ ಹಾಗೂ ಬದ್ಧತೆಯನ್ನು ಸಮರ್ಥಿಸುತ್ತದೆ ಎಂದು 1992ರ ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿನ ಪಿತೂರಿ ಆರೋಪದಿಂದ ಖುಲಾಸೆಗೊಂಡಿರುವ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ.

ಈ ತೀರ್ಪು 2019ರ ನವೆಂಬರ್‌ನಲ್ಲಿ ನೀಡಿದ ಸುಪ್ರೀಂಕೋರ್ಟ್‌ನ ಮತ್ತೊಂದು ಹೆಗ್ಗುರುತು ತೀರ್ಪಿನ ಹೆಜ್ಜೆಯಲ್ಲಿದೆ ಎನ್ನುವುದು ನನ್ನ ಭಾವನೆೆ. ಇದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ನೋಡುವ ನನ್ನ ಬಹುದಿನಗಳ ಕನಸಿಗೆ ದಾರಿ ಮಾಡಿಕೊಟ್ಟಿದೆ. ರಾಮಮಂದಿರದ ಭೂಮಿಪೂಜೆಯು ಆಗಸ್ಟ್ 5ರಂದು ನಡೆದಿದೆ ಎಂದು 92ರ ವಯಸ್ಸಿನ ಅಡ್ವಾಣಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಲಕ್ನೊದ ಸಿಬಿಐ ವಿಶೇಷ ನ್ಯಾಯಾಲಯವು ಅಡ್ವಾಣಿ, ಎಂಎಂ ಜೋಶಿ, ಉಮಾಭಾರತಿ ಸಹಿತ 32 ಆರೋಪಿಗಳನ್ನು ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ದೋಷಮುಕ್ತಗೊಳಿಸಿ ಇಂದು ಮಹತ್ವದ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News