ಬಸ್ಸುಗಳಲ್ಲೇಕೆ ಈ ಕ್ರಮಗಳು ಪಾಲನೆಯಾಗುತ್ತಿಲ್ಲ?

Update: 2020-10-07 17:20 GMT

ಮಾನ್ಯರೇ,

ಮೊನ್ನೆ ಬೆಂಗಳೂರಿನ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದಿಂದ ಮೆಟ್ರೊ ಮುಖಾಂತರ ಮೆಜೆಸ್ಟಿಕ್ ಹೋಗುವಾಗ ಮೆಟ್ರೊದಲ್ಲಿದ್ದ ಕೊರೋನ ಎಚ್ಚರಿಕೆ ಕ್ರಮಗಳು ಮೆಚ್ಚಿಗೆಯಾಯಿತು. ಒಬ್ಬರೊಬ್ಬರು ಅಂತರ ಕಾಯ್ದುಕೊಳ್ಳದೆ ಮತ್ತು ಮಾಸ್ಕ್ ಸರಿಯಾಗಿ ಹಾಕಿಕೊಳ್ಳದಿದ್ದರೆ ಅಲ್ಲಿನ ಅಧಿಕಾರಿಗಳು ಅಂತಹವರನ್ನು ವೀಕ್ಷಿಸುತ್ತಾ ಎಚ್ಚರಿಕೆ ಕ್ರಮಗಳನ್ನು ಪಾಲಿಸಲು ಅವರಿಗೆ ಪದೇ ಪದೇ ಹೇಳುತ್ತಿದ್ದರು. ಆದರೆ ಇಂತಹದ್ದೇ ಕ್ರಮಗಳು ಬಿಎಂಟಿಸಿ ಬಸ್ ಮತ್ತು ದೂರದ ಪ್ರಯಾಣದ ಬಸ್ಸುಗಳಲ್ಲಿ ಏಕಿಲ್ಲವೆಂದು ತಿಳಿಯುತ್ತಿಲ್ಲ.

ಇತೀಚಿನ ದಿನಗಳಲ್ಲಿ ನೂಕುನುಗ್ಗಲು ಮಾಡಿಕೊಂಡು ಜನರು ಬಸ್ಸುಗಳಿಗೆ ಹತ್ತುತ್ತಿದ್ದಾರೆ. ಅಲ್ಲದೆ ಅಲ್ಲಿ ಮಾಸ್ಕ್ ಹಾಕಿಕೊಳ್ಳದಿದ್ದರೂ ಯಾರೂ ಕೇಳುವವರಿಲ್ಲ. ಮೆಟ್ರೊಗಿಂತ ಹೆಚ್ಚಿನ ಜನರು ಸೇರುವ ಬಸ್ ನಿಲ್ದಾಣಗಳಲ್ಲಿ ಎಚ್ಚರಿಕೆಯ ಕ್ರಮಗಳನ್ನು ತಿಳಿಸುವ ಅಧಿಕಾರಿಗಳೇ ಕಾಣಿಸುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ದಿನಕ್ಕೆ 10 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿದ್ದು ಎಲ್ಲರಲ್ಲಿಯೂ ಆತಂಕ ಸೃಷ್ಟಿಸಿದೆ. ಮೆಟ್ರೊ ನಿಲ್ದಾಣದಲ್ಲಿದ್ದಂತಹ ಎಚ್ಚರಿಕೆ ಕ್ರಮಗಳು ಸಾರಿಗೆ ನಿಲ್ದಾಣಗಳಲ್ಲೂ ಕಾಣಿಸಿಕೊಂಡರೆ ಉತ್ತಮ. ಆದ್ದರಿಂದ ಸರಕಾರವು ಇನ್ನಾದರೂ ಬಸ್ಸು ಪ್ರಯಾಣದಲ್ಲಿ ಎಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಲು ಗಮನಹರಿಸಬೇಕಾಗಿದೆ. 

Writer - -ಇರ್ಫಾನ್ ರೋಣ, ಬೆಂಗಳೂರು

contributor

Editor - -ಇರ್ಫಾನ್ ರೋಣ, ಬೆಂಗಳೂರು

contributor

Similar News