ಪೊಲೀಸ್ ಠಾಣೆಗೆ ತೆರಳಿ ಚುಡಾವಣೆ ಪ್ರಕರಣದ ಆರೋಪಿಯನ್ನು ಬಿಡಿಸಿ ಕರೆದೊಯ್ದ ಬಿಜೆಪಿ ಶಾಸಕ: ಆರೋಪ

Update: 2020-10-17 11:28 GMT
ಸಾಂದರ್ಭಿಕ ಚಿತ್ರ

ಲಕ್ನೋ : ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರಕ್ಕೆ ಮುಜುಗರ ತಂದಿರುವ ಘಟನೆಯೊಂದರಲ್ಲಿ ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್ ಸಿಂಗ್ ಮತ್ತವರ ಪುತ್ರ ಲಖೀಂಪುರ್ ನ ಮೊಹಮ್ಮದಿ ಪೊಲೀಸ್ ಠಾಣೆಗೆ ಶುಕ್ರವಾರ ಮಧ್ಯರಾತ್ರಿ ಭೇಟಿ ನೀಡಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿ ಚುಡಾವಣೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಕಾರ್ಯಕರ್ತನನ್ನು ಪೊಲೀಸ್ ಕಸ್ಟಡಿಯಿಂದ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಠಾಣೆಗೆ ಶಾಸಕನೊಂದಿಗೆ ಆಗಮಿಸಿದ ಪಕ್ಷದ ಕಾರ್ಯಕರ್ತರು ಪೊಲೀಸರಿಂದ ಲಾಕಪ್ ಬೀಗದ ಕೈ ಕೇಳುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಬಿಜೆಪಿ ಶಾಸಕ, ಅವರ ಪುತ್ರ ಮತ್ತಿತರ ಕಾರ್ಯಕರ್ತರು ಆರೋಪಿಯೊಂದಿಗೆ ಹೊರನಡೆಯುತ್ತಿರುವಾಗ ಅವರನ್ನು ಯಾವ ಪೊಲೀಸರು ಪ್ರಶ್ನಿಸಿಲ್ಲ ಎನ್ನಲಾಗಿದೆ. 

ಪೊಲೀಸರು ಈ ಘಟನೆಯ ಕುರಿತು ಮೌನ ವಹಿಸಿದ್ದಾರೆ, ಆದರೆ ಶಾಸಕ ಮಾತ್ರ ತಾವೇನೂ ರಾದ್ಧಾಂತ ಮಾಡಿಲ್ಲ ತನ್ನ ಹೆಸರಿಗೆ ಕಳಂಕ ತರಲು ಹೀಗೆಲ್ಲ ಹೇಳಲಾಗುತ್ತಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News