ಪಾಟೀದಾರ್ ಚಳುವಳಿ ಪ್ರಕರಣ: ಜಾಮೀನು ಷರತ್ತು ತೆಗೆದು ಹಾಕುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಹಾರ್ದಿಕ್ ಪಟೇಲ್

Update: 2020-10-22 18:07 GMT

ಅಹ್ಮದಾಬಾದ್, ಅ. 22:  ಪಾಟೀದಾರ್ ಚಳವಳಿ ಪ್ರಕರಣದ ತನ್ನ ಜಾಮೀನು ಷರತ್ತನ್ನು ಖಾಯಂ ಆಗಿ ತೆಗೆದು ಹಾಕುವಂತೆ ಕೋರಿ ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಬುಧವಾರ ಗುಜರಾತ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಜಾಮೀನು ಷರತ್ತಿನಲ್ಲಿ 12 ವಾರಗಳ ಅವಧಿಗೆ ಮಾರ್ಪಾಟು ಮಾಡಬೇಕು ಎಂದು ಕೋರಿ ಹಾರ್ದಿಕ್ ಪಟೇಲ್ ಅವರು ಎರಡನೇ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಅವರು ಅಹ್ಮದಾಬಾದ್ ಸತ್ರ ನ್ಯಾಯಾಲಯದಲ್ಲಿ ಈ ಮನವಿ ಸಲ್ಲಿಸಿದ್ದರು. ಆದರೆ, ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಹಾರ್ದಿಕ್ ಪಟೇಲ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಆನಂದ್ ಯಾಗ್ನಿಕ್ ಎರಡೂ ವಿಷಯಗಳ ವಿಚಾರಣೆಯನ್ನು ಸೋಮವಾರ ನಡೆಸಬೇಕೆಂದು ಕೋರಿದರು. ಈ ಹಿನ್ನೆಲೆಯಲ್ಲಿ ಈ ಎರಡೂ ವಿಷಯಗಳ ವಿಚಾರಣೆ ಅಕ್ಟೋಬರ್ 23ರಂದು ವಿಭಾಗೀಯ ನ್ಯಾಯಪೀಠ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News