ಹಿಝ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಎನ್ ಕೌಂಟರ್ ನಲ್ಲಿ ಸಾವು
Update: 2020-11-01 18:37 IST
ಶ್ರೀನಗರ: ಭಯೋತ್ಪಾದಕ ಸಂಘಟನೆ ಹಿಝ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಫುಲ್ಲಾನನ್ನು ಶ್ರೀನಗರದ ಹೊರ ವಲಯದಲ್ಲಿ ಎನ್ ಕೌಂಟರ್ ಮೂಲಕ ಸಾಯಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಇದು ಉಗ್ರರ ವಿರುದ್ಧ ಪ್ರಮುಖ ಯಶಸ್ಸಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ವರ್ಷದ ಮೇ ನಲ್ಲಿ ರಿಯಾಝ್ ನೈಕೂನನ್ನು ಹತ್ಯೆಗೈದ ಬಳಿಕ ಸೈಫುಲ್ಲಾ ಉಗ್ರ ಸಂಘಟನೆಯ ನೇತೃತ್ವವಹಿಸಿದ್ದ. ಈತ ಜಮ್ಮು-ಕಾಶ್ಮೀರ ಪೊಲೀಸರಿಗೆ ಬೇಕಾಗಿದ್ದ ಉಗ್ರಗಾಮಿಯಾಗಿದ್ದ. ಭದ್ರತಾ ಸಿಬ್ಬಂದಿಗಳ ಮೇಲಿನ ಹಲವು ದಾಳಿಗಳಲ್ಲಿ ಈತ ಭಾಗಿಯಾಗಿದ್ದ ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.