ಮಹಾರಾಷ್ಟ್ರ: ನ.16ರಿಂದ ತೆರೆಯಲಿರುವ ಧಾರ್ಮಿಕ ಕೇಂದ್ರಗಳು

Update: 2020-11-14 17:52 GMT

ಮುಂಬೈ, ನ. 14: ರಾಜ್ಯದಲ್ಲಿ ಇನ್ನೊಂದು ಹಂತದ ಅನ್‌ಲಾಕ್ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಧಾರ್ಮಿಕ ಆರಾಧನಾ ಸ್ಥಳಗಳನ್ನು ನವೆಂಬರ್ 16ರಿಂದ ಮರು ತೆರೆಯಲು ಸರಕಾರ ನಿರ್ಧರಿಸಿದೆ ಎಂದು ಶನಿವಾರ ಘೋಷಿಸಿದ್ದಾರೆ.

ಕೊರೋನ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಕೇಂದ್ರ ಸರಕಾರ ದೇಶಾದ್ಯಂತ ಮಾರ್ಚ್ 25ರಂದು ಲಾಕ್‌ಡೌನ್ ಘೋಷಿಸಿದ ಬಳಿಕ ರಾಜ್ಯಾದ್ಯಂತ ಧಾರ್ಮಿಕ ಆರಾಧನ ಕೇಂದ್ರಗಳು ಮುಚ್ಚಿದ್ದವು.

ಲಾಕ್‌ಡೌನ್ ಸಂದರ್ಭ ಆರಾಧನಾ ಸ್ಥಳಗಳು ಮುಚ್ಚಿದ್ದವು. ದೇವರು ವೈದ್ಯರು ಹಾಗೂ ದಾದಿಯರ ರೂಪದಲ್ಲಿ ಎಲ್ಲ ಭಕ್ತರ ಕಾಳಜಿ ವಹಿಸಿದ್ದರು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಠಾಕ್ರೆ, ‘‘ರಾಕ್ಷಸ ಕೊರೋನ ವೈರಸ್ ಈಗಲೂ ನಮ್ಮ ನಡುವೆ ಇದೆ ಎಂಬುದನ್ನು ನಾವು ಮರೆಯಬಾರದು. ಆದರೂ ಈಗ ಈ ರಾಕ್ಷಸ ನಿಧಾನವಾಗಿ ವೌನವಾಗುತ್ತಿದ್ದಾನೆ. ಅದಕ್ಕಾಗಿ ನಾವು ಸಂತೃಪ್ತಿ ಹೊಂದಲು ಸಾಧ್ಯವಿಲ್ಲ. ನಾಗರಿಕರು ಶಿಸ್ತು ಪಾಲಿಸುವ ಅಗತ್ಯ ಇದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News