ಕೊರೋನ ಚಿಕಿತ್ಸೆಯಲ್ಲಿ ರೆಮ್‌ಡೆಸಿವಿರ್‌ನಿಂದ ಉಪಯೋಗವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

Update: 2020-11-20 18:00 GMT

ಪ್ಯಾರಿಸ್ (ಫ್ರಾನ್ಸ್), ನ. 20: ಕೊರೋನ ವೈರಸ್ ರೋಗಿಗಳ ಪರಿಸ್ಥಿತಿ ಎಷ್ಟೇ ಗಂಭೀರವಾಗಿದ್ದರೂ, ವೈರಸ್ ನಿರೋಧಕ ಔಷಧ ರೆಮ್‌ಡೆಸಿವಿರ್‌ನ್ನು ಅವರ ಚಿಕಿತ್ಸೆಯಲ್ಲಿ ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ. ಈ ಔಷಧಿಯು ರೋಗಿಗಳು ಚೇತರಿಸುವ ನಿಟ್ಟಿನಲ್ಲಿ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಅದು ಹೇಳಿದೆ.

ಈ ಔಷಧಿಯು ರೋಗಿಗಳ ಚೇತರಿಕೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಈಗ ಲಭ್ಯವಿರುವ ಅಂಕಿಅಂಶಗಳು ತೋರಿಸಿವೆ ಎಂದು ಅಂತರ್‌ರಾಷ್ಟ್ರೀಯ ಪರಿಣತರನ್ನೊಳಗೊಂಡ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಅಭಿವೃದ್ಧಿ ಗುಂಪು (ಜಿಡಿಜಿ) ಹೇಳಿದೆ.

ಈ ಔಷಧಿಯು ಆರಂಭದಲ್ಲಿ ಕೆಲವು ಗಂಭೀರಾವಸ್ಥೆಯಲ್ಲಿದ್ದ ರೋಗಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಿತ್ತು.

ಕೆಲವು ಕೊರೋನ ವೈರಸ್ ರೋಗಿಗಳ ಚೇತರಿಕೆ ಅವಧಿಯನ್ನು ರೆಮ್‌ಡೆಸಿವಿರ್ ಕಡಿತಗೊಳಿಸಬಹುದು ಎನ್ನುವುದನ್ನು ಆರಂಭಿಕ ಸಂಶೋಧನೆ ತೋರಿಸಿದ ಬಳಿಕ, ಈ ಔಷಧಿಯ ಬಳಕೆಗೆ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಇತರ ಕೆಲವು ದೇಶಗಳು ತಾತ್ಕಾಲಿಕ ಅನುಮೋದನೆ ನೀಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News