ಬ್ಯಾಂಕ್ ಗಳ ಸ್ಥಾಪನೆಗೆ ಟಾಟಾ, ಬಿರ್ಲಾ, ಅಂಬಾನಿಗೆ ಬಾಗಿಲು ತೆರೆಯಲಿರುವ ಆರ್ ಬಿಐ

Update: 2020-11-22 18:21 GMT

ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ( ಆರ್ ಬಿಐ) ಇದೇ ಮೊದಲ ಬಾರಿ ಪೇಮಂಟ್ ಬ್ಯಾಂಕ್ ಗಳ ಸ್ಥಾಪನೆಗೆ ಕಾರ್ಪೋರೇಟ್ ಕಂಪೆನಿಗಳಿಗೆ ಅವಕಾಶ ಮಾಡಿಕೊಡಲಿದೆ.  ದೇಶದ ಪ್ರಮುಖ ಕೈಗಾರಿಕಾ ಸಂಸ್ಥೆಗಳಾದ ಟಾಟಾ, ಬಿರ್ಲಾ, ಅಂಬಾನಿ, ಮಹೀಂದ್ರ ಇನ್ನಿತರ ಸಮೂಹಗಳಿಗೆ ಬ್ಯಾಂಕ್ ನಡೆಸಲು ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಅವಕಾಶ ನೀಡಬಹುದೆಂದು ಆರ್ ಬಿಐ ಸಲಹೆ ನೀಡಿದೆ ಎಂದು businesstoday.in ವರದಿ ಮಾಡಿದೆ.   

ರಿಲಯನ್ಸ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ನುವೊ, ಟೆಕ್ ಮಹೀಂದ್ರಾ, ಟಾಟಾ ಸನ್ಸ್, ಸನ್ ಫರ್ಮಾ ಇನ್ನಿತರ ಕಂಪೆನಿಗಳು ಬ್ಯಾಂಕ್ ತೆರೆಯಲು ಪರವಾನಗಿಗಾಗಿ ಅರ್ಜಿ ಹಾಕಿವೆ. ಈ ಪೈಕಿ ಕೆಲವು ಕಂಪೆನಿಗಳು ಪಾವತಿ ಬ್ಯಾಂಕಿಂಗ್ ಮಾದರಿಯ  ಕಾರ್ಯ ಸಾಧ್ಯತೆ ಬಗ್ಗೆ ಅಂಜಿಕೆಯಿಂದ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆದಿವೆ.

ಈಗ ಪರವಾನಗಿ ಪಡೆಯಲು ಅರ್ಹವಾಗಿರುವ ಕಂಪೆನಿಗಳು ಎಚ್ ಡಿ ಎಫ್ ಸಿ ಹಾಗೂ ಐಸಿಐಸಿಐ ಬ್ಯಾಂಕ್ ಗಳಂತೆ ಖಾಸಗಿ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬ್ಯಾಂಕ್ ತೆರೆಯಬಹುದಾಗಿದೆ ಎಂದು ಆರ್ ಬಿಐ ರಚಿಸಿದ್ದ ಆಂತರಿಕ ಕಾರ್ಯ ನಿರ್ವಹಣಾ ಗುಂಪು ಶುಕ್ರವಾರ ಬಹಿರಂಗಗೊಳಿಸಿದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News