ಕೊರೋನ ಸೋಂಕು ಪ್ರಕರಣ ಏರಿಕೆ: ಪಂಜಾಬ್, ಹಿ.ಪ್ರ. ಉ.ಪ್ರ, ಛತ್ತೀಸ್‌ಗಢಕ್ಕೆ ಕೇಂದ್ರದ ತಂಡ

Update: 2020-11-22 18:17 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ. 22: ಏರಿಕೆಯಾಗುತ್ತಿರುವ ಕೊರೋನ ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ನೆರವು ನೀಡಲು ಕೇಂದ್ರ ಸರಕಾರ ರವಿವಾರ ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಪ್ರದೇಶ ಹಾಗೂ ಛತ್ತೀಸ್‌ಗಢಕ್ಕೆ ಉನ್ನತ ಮಟ್ಟದ ಸಮಿತಿಯನ್ನು ಕಳುಹಿಸಿದೆ.

ಕೇಂದ್ರ ಸರಕಾರ ಕಳೆದ ವಾರ ಹರ್ಯಾಣ, ರಾಜಸ್ಥಾನ, ಗುಜರಾತ್ ಹಾಗೂ ಮಣಿಪುರಕ್ಕೆ ಉನ್ನತ ಮಟ್ಟದ ಸಮಿತಿಯನ್ನು ಕಳುಹಿಸಿ ಕೊಟ್ಟಿತ್ತು. ಈ ಎಲ್ಲಾ ರಾಜ್ಯಗಳಲ್ಲಿ ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

‘‘ಈ ಮೂರು ಸದಸ್ಯರ ತಂಡಗಳು ಕೊರೋನ ಸೋಂಕು ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಅಲ್ಲದೆ, ಕಂಟೈನ್ಮೆಂಟ್, ನಿಗಾ, ಪರೀಕ್ಷೆ, ಸೋಂಕು ತಡೆ, ನಿಯಂತ್ರಣ ಕ್ರಮಗಳು ಹಾಗೂ ಪಾಸಿಟಿವ್ ಪ್ರಕರಣಗಳ ಸಮರ್ಥ ವೈದ್ಯಕೀಯ ನಿರ್ವಹಣೆಯನ್ನು ಸಶಕ್ತಗೊಳಿಸಲು ರಾಜ್ಯ ಸರಕಾರಗಳಿಗೆ ನರವು ನೀಡಲಿದೆ. ಸಮಯೋಚಿತ ಪರೀಕ್ಷೆ ಹಾಗೂ ಅನುಸರಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೂಡ ಈ ತಂಡ ರಾಜ್ಯ ಸರಕಾರಗಳಿಗೆ ಮಾರ್ಗದರ್ಶನ ನೀಡಲಿದೆ’’ ಎಂದು ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News