ವಿಜಯ್ ಮಲ್ಯ 14 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Update: 2020-12-05 14:04 GMT

ಹೊಸದಿಲ್ಲಿ, ಡಿ.5: ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದೆ ವಂಚಿಸಿದ ಆರೋಪ ಎದುರಿಸುತ್ತಿರುವ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಫ್ರಾನ್ಸ್‌ನಲ್ಲಿ ಹೊಂದಿರುವ 14 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಭಾರತದ ಜಾರಿ ನಿರ್ದೇಶನಾಲಯದ ಮನವಿಯಂತೆ ಅಲ್ಲಿನ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫ್ರಾನ್ಸ್‌ನ 32 ಅವೆನ್ಯೂ ಫಾಚ್‌ನಲ್ಲಿ ಇರುವ ಈ ಆಸ್ತಿಯನ್ನು ಭಾರತದ ಜಾರಿ ನಿರ್ದೇಶನಾಲಯದ ಕೋರಿಕೆಯಂತೆ ಹರಾಜು ಹಾಕಲಾಗಿದೆ. ಈ ಆಸ್ತಿ ಖರೀದಿಗೆ ಭಾರತದಿಂದ ಅಕ್ರಮವಾಗಿ ಹಣ ವರ್ಗಾಯಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಜಯ್ ಮಲ್ಯ ಭಾರತದಲ್ಲಿ ಬ್ಯಾಂಕ್‌ಗಳಿಗೆ 9,000 ಕೋಟಿ ರೂ.ಗೂ ಅಧಿಕ ಮೊತ್ತದ ಸಾಲ ಮರುಪಾವತಿಸದ ಪ್ರಕರಣ ಎದುರಿಸುತ್ತಿದ್ದು 2016ರಿಂದ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News