ಮುಂಬೈ: ಮಾರ್ಚ್‌ ಬಳಿಕ ಮೊದಲ ಬಾರಿಗೆ ಶೇ.5ಕ್ಕೆ ಕುಸಿದ ಕೋವಿಡ್ ಪಾಸಿಟಿವಿಟಿ ದರ

Update: 2020-12-05 15:27 GMT

ಮುಂಬೈ,ಡಿ.5: ಮುಂಬೈನಲ್ಲಿ ಕೊರೋನ ವೈರಸ್ ಪರೀಕ್ಷೆಗಳ ಪಾಸಿಟಿವಿಟಿ ದರವು ಮಾರ್ಚ್‌ನಿಂದೀಚಿಗೆ ಇದೇ ಮೊದಲ ಬಾರಿಗೆ ಶೇ.5ಕ್ಕೆ ಕುಸಿದಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆಯ ಆಯುಕ್ತ ಐ.ಎಸ್.ಚಹಲ್ ಅವರು ಶನಿವಾರ ತಿಳಿಸಿದ್ದಾರೆ.

 ಕೊರೋನ ವೈರಸ್ ಸಾಂಕ್ರಾಮಿಕವು ಆರಂಭಗೊಂಡಾಗ ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.35ರಿಂದ ಶೇ.36ರಷ್ಟಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿರುವ ಅವರು, ಕಳೆದ 10 ದಿನಗಳ ಕೋವಿಡ್ ಟೆಸ್ಟ್ ಪಾಸಿಟಿವಿಟಿ ದರವು ಭರವಸೆದಾಯಕವಾಗಿ ಕಂಡು ಬರುತ್ತಿದೆ. ಆದರೆ ಇಷ್ಟಕ್ಕೇ ನಾವು ಸಂತೃಪ್ತಿಯನ್ನು ಪಟ್ಟುಕೊಳ್ಳುವಂತಿಲ್ಲ ಮತ್ತು ಸುರಕ್ಷತಾ ಕ್ರಮಗಳನ್ನು ತಗ್ಗಿಸುವಂತಿಲ್ಲ ಎಂದಿದ್ದಾರೆ.

ಡಿ.4ರಂದು ನಗರದಲ್ಲಿ 16,394 ಪರೀಕ್ಷೆಗಳನ್ನು ನಡೆಸಲಾಗಿದ್ದು,ಈ ಪೈಕಿ 825 ಅಥವಾ ಶೇ.5.03ರಷ್ಟು ಪ್ರಕರಣಗಳು ಪಾಸಿಟಿವ್ ಆಗಿದ್ದವು. ನ.25ರಂದು ಪಾಸಿಟಿವಿಟಿ ದರವು ಶೇ.6.69 ಆಗಿತ್ತು ಎಂದು ಚಹಲ್ ತಿಳಿಸಿದ್ದಾರೆ.

ಕಳೆದ ಆರು ದಿನಗಳಿಂದ ಮುಂಬೈಯಲ್ಲಿ ಪ್ರತಿದಿನ ಸಾವಿರಕ್ಕೂ ಕಡಿಮೆ ಹೊಸ ಪ್ರಕರಣಗಳು ವರದಿಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News