ಪ್ರತಿಭಟನಾ ನಿರತ ರೈತರಿಗೆ 24 ಗಂಟೆಗಳ ಕಾಲ ಆಹಾರ ಪೂರೈಸುತ್ತಿರುವ ಮುಸ್ಲಿಂ ಫೆಡರೇಶನ್ ಆಫ್ ಪಂಜಾಬ್

Update: 2020-12-05 15:52 GMT

ಹೊಸದಿಲ್ಲಿ, ಡಿ. 5: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ದಿಲ್ಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ 25 ಮುಸ್ಲಿಂ ಸದಸ್ಯರನ್ನು ಒಳಗೊಂಡ ತಂಡ ಬುಧವಾರದಿಂದ ಆಹಾರ ಪೂರೈಕೆಯಲ್ಲಿ ತೊಡಗಿಕೊಂಡಿದೆ.

ಪ್ರತಿಯೊಬ್ಬರಿಗೂ ಆಹಾರ ನೀಡುವ ರೈತರಿಗೆ ಆಹಾರ ಪೂರೈಸಲು ನಾವು ಇಲ್ಲಿಗೆ ಆಗಮಿಸಿದೆವು ಎಂದು ಮುಸ್ಲಿಂ ಫೆಡರೇಶನ್ ಆಫ್ ಪಂಜಾಬ್ ತಂಡದ ನೇತೃತ್ವ ವಹಿಸಿರುವ ಫಾರೂಕಿ ಮುಬೀನ್ ಹೇಳಿದ್ದಾರೆ. ಪ್ರತಿಭಟನೆ ಮುಂದುವರಿಯುವ ವರೆಗೆ ಆಹಾರ ಪೂರೈಕೆ ಮುಂದುವರಿಯಲಿದೆ. ರೈತರು ನಮಗೆ ಆಹಾರ ಪೂರೈಸುತ್ತಾರೆ.

ಇದು ಅವರಿಗೆ ಕೃತಜ್ಞತೆ ಸಲ್ಲಿಸುವ ಒಂದು ಸದವಕಾಶ ಎಂದು ಅವರು ಹೇಳಿದ್ದಾರೆ. ‘‘ರೈತರ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ನಮ್ಮದು ಆಹಾರ ಪೂರೈಸಲು ನಿರಂತರ ಕಾರ್ಯ ನಿರ್ವಹಿಸುತ್ತಿರುವ 25 ಸ್ವಯಂ ಸೇವಕರ ತಂಡ’’ ಎಂದು ಮುಬೀನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News