ದಿಲ್ಲಿ ಬಿಜೆಪಿ ವಕ್ತಾರ ಸಂದೀಪ್ ಶುಕ್ಲಾ ರಸ್ತೆ ಅಪಘಾತಕ್ಕೆ ಬಲಿ
Update: 2020-12-06 18:41 IST
ಕನೌಜ್(ಉ.ಪ್ರ.): ಎಕ್ಸ್ ಪ್ರೆಸ್ ಹೈವೆಯಲ್ಲಿ ಕಾರೊಂದು ಟ್ರಕ್ ಗೆ ಢಿಕ್ಕಿಯಾದ ಪರಿಣಾಮ ದಿಲ್ಲಿ ಬಿಜೆಪಿಯ ವಕ್ತಾರ ಹಾಗೂ ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇತರ ಐವರು ಗಾಯಗೊಂಡಿರುವ ಘಟನೆ ರವಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂದೀಪ್ ಶುಕ್ಲಾ(45), ಅವರ ಪತ್ನಿ ಅನಿತಾ (42) ಅವರ ಮೂವರು ಪುತ್ರರು ಹಾಗೂ ನೆರೆಮನೆಯವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಾಪ್ ಗಢಕ್ಕೆ ತೆರಳುತ್ತಿದ್ದಾಗ ಥಥೀಯಾ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ.
ಶುಕ್ಲಾ ಹಾಗೂ ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಶುಕ್ಲಾ ದಂಪತಿಯ ಪುತ್ರರಾದ ಸಿದ್ದಾರ್ಥ್, ಅಭಿನವ್ ಹಾಗೂ ಅರವ್, ನೆರೆಮನೆಯವರಾದ ಅಮಿತ್ ಕುಮಾರ್ ಹಾಗೂ ಆರ್ಯನ್ ಶರ್ಮಾ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.