ಸೆರಮ್ ನೀಡಲಿರುವ ಕೊರೋನ ಲಸಿಕೆಯ ಡೋಸ್ ಗೆ ಎಷ್ಟು ರೂ. ಗೊತ್ತಾ ?

Update: 2020-12-08 15:13 GMT

ಮುಂಬೈ, ಡಿ.8: ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಕೊರೋನ ಸೋಂಕಿಗೆ ಲಸಿಕೆ ಪೂರೈಸುವ ಕುರಿತು ಶೀಘ್ರವೇ ಕೇಂದ್ರ ಸರಕಾರದೊಂದಿಗೆ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಲಿದ್ದು ಪ್ರತೀ ಡೋಸ್‌ಗೆ 250 ರೂ. ದರ ನಿಗದಿಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದ ಖಾಸಗಿ ಮಾರುಕಟ್ಟೆಯಲ್ಲಿ ಲಸಿಕೆಯ ಪ್ರತೀ ಡೋಸ್‌ಗೆ 1,000 ರೂ. ದರ ನಿಗದಿಗೊಳಿಸುತ್ತೇವೆ. ಆದರೆ ಸರಕಾರಕ್ಕೆ ಪೂರೈಸುವಾಗ ಬೃಹತ್ ಪ್ರಮಾಣದಲಿ ಆರ್ಡರ್ ಸಲ್ಲಿಸಿದರೆ ಕಡಿಮೆ ದರ ನಿಗದಿ ಮಾಡುತ್ತೇವೆ . ಲಸಿಕೆ ಸಿದ್ಧಗೊಂಡ ಬಳಿಕ ಭಾರತೀಯರಿಗೆ ಮೊದಲ ಆದ್ಯತೆ. ಬಳಿಕ ಇತರ ರಾಷ್ಟ್ರಗಳಿಗೆ ಪೂರೈಸುತ್ತೇವೆ ಎಂದು ಸೆರಮ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದಾರ್ ಪೂನಾವಾಲ ಈ ಹಿಂದೆ ಹೇಳಿಕೆ ನೀಡಿದ್ದರು.

ಸೆರಮ್ ಸಂಸ್ಥೆ ಸಿದ್ಧಪಡಿಸಲಿರುವ ಲಸಿಕೆಯನ್ನು ದೇಶದೆಲ್ಲೆಡೆ ಪೂರೈಸಲು ಸರಕಾರ ಸಿದ್ಧತೆ ನಡೆಸಿದೆ. ಈ ಮಧ್ಯೆ, ಬ್ರಿಟನ್ ಮೂಲದ ಔಷಧ ಉತ್ಪಾದನಾ ಸಂಸ್ಥೆ ಅಸ್ಟ್ರಾಜೆನಿಕ ಸಂಸ್ಥೆಯು ತಾನು ತಯಾರಿಸುವ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಬೇಕೆಂದು ಸೋಮವಾರ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News