×
Ad

ಖ್ಯಾತ ಹಿರಿಯ ವಿಜ್ಞಾನಿ ನರಸಿಂಹ ನಿಧನ

Update: 2020-12-14 23:50 IST

ಬೆಂಗಳೂರು: ಖ್ಯಾತ ಹಿರಿಯ ವಿಜ್ಞಾನಿ ಪ್ರೊ.ರೊಡ್ಡಮ್ ನರಸಿಂಹ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

  ನರಸಿಂಹ ಅವರು ತಮ್ಮ ವೃತ್ತಿಜೀವನದಲ್ಲಿ ಇಸ್ರೋ ಹಾಗೂ ಲಘು ಯುದ್ದ ವಿಮಾನ ಸಹಿತ ಭಾರತದ ಪ್ರಮುಖ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಕಾಣಿಕೆ ನೀಡಿದ್ದರು. ಇವರು ಪ್ರೊ. ಸತೀಶ್ ಧವನ್ ಅವರ ಮೊದಲ ವಿದ್ಯಾರ್ಥಿಯಾಗಿದ್ದರು. ಇತ್ತೀಚೆಗಿನ ತನಕವೂ ಸಕ್ರಿಯವಾಗಿದ್ದ ನರಸಿಂಹ ಅವರು ಜವಾಹರ್‌ಲಾಲ್ ನೆಹರೂ ಸೆಂಟರ್‌ನ ಸುಧಾರಿತ ವೈಜ್ಞಾನಿಕ ಸಂಶೋಧನೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್)ಯಲ್ಲಿ ಕಾರ್ಯನಿರ್ವಹಿಸಿದ್ದರು. 2013ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News