ದಿಲ್ಲಿ-ಉತ್ತರಪ್ರದೇಶ ಗಡಿಯಲ್ಲಿ ಪ್ರತಿಭಟನೆ ವೇಳೆ ಮೃತಪಟ್ಟ ರೈತರಿಗೆ ಗೌರವ ಸಲ್ಲಿಕೆ

Update: 2020-12-20 11:22 GMT

 ಹೊಸದಿಲ್ಲಿ: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇಂದು 25ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯ ವೇಳೆ ಮೃತಪಟ್ಟವರಿಗೆ ಪ್ರತಿಭಟನಾಕಾರರು ಗೌರವ ಸಮರ್ಪಿಸಿದರು. ಪ್ರತಿಭಟನೆಯ ವೇಳೆ ಮೃತಪಟ್ಟವರಿಗೆ ನಮನ ಸಲ್ಲಿಸಲು ರೈತ ಸಂಘಟನೆಗಳು ಇಂದು ನಿರ್ಧರಿಸಿದ್ದವು.

ಕೇಂದ್ರ ಸರಕಾರದ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದಾಗ ಮೃತಪಟ್ಟಿರುವ ರೈತರಿಗೆ ನಾವು ಗೌರವ ಸಲ್ಲಿಸಿದ್ದೇವೆ ಎಂದು ಪ್ರತಿಭಟನಕಾರರೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

ಈಗ ನಡೆಯುತ್ತಿರುವ ಪ್ರತಿಭಟನೆಯ ವೇಳೆ ನವೆಂಬರ್ 26ರ ಬಳಿಕ ಅಪಘಾತ, ಜ್ವರ, ಚಳಿಯ ವಾತಾವರಣದಿಂದಾಗಿ 33 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್)ತಿಳಿಸಿದೆ.

ಇತ್ತೀಚೆಗಷ್ಟೇ 38ರ ವಯಸ್ಸಿನ ಭೀಮ್ ಸಿಂಗ್ ಸಿಂಘು ಗಡಿಯಲ್ಲಿ ವಿಪರೀತ ಚಳಿ ತಾಳಲಾರದೆ ಮೃತಪಟ್ಟಿದ್ದಾರೆ. ಗುರುವಾರ ಟಿಕ್ರಿ ಗಡಿಯಲ್ಲಿ ಹೃದಯಸ್ತಂಭನದಿಂದ ಜೈ ಸಿಂಗ್ ಮೃತಪಟ್ಟಿದ್ದಾರೆ. ಇನ್ನೋರ್ವ ರೈತ ಕುಲ್ವಿಂದರ್ ಟಿಕ್ರಿ ಗಡಿಯತ್ತ ಆಗಮಿಸುತ್ತಿದ್ದಾಗ ಟ್ರಾಕ್ಟರ್ ಟ್ರೋಲಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಹರ್ಯಾಣದ ಸಿಖ್ ಸಂತರೊಬ್ಬರು ಸುಸೈಡ್ ನೋಟ್‌ನಲ್ಲಿ ಪ್ರತಿಭಟನಾನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಆತ್ಮಹತ್ಯೆಗೆ ಶರಣಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News