×
Ad

ಜೈಲಿನಲ್ಲಿ ಸಹ ಕೈದಿಗಳಿಂದ ಕಿರುಕುಳ: ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್ ಆರೋಪ

Update: 2020-12-22 23:47 IST

ಹೊಸದಿಲ್ಲಿ, ಡಿ. 22: ಮಂಡೋಲಿ ಕಾರಾಗೃಹದಲ್ಲಿ ನಿರಂತರ ಕಿರುಕುಳ ಎದುರಿಸಿದೆ ಹಾಗೂ ಅಲ್ಲಿನ ಕೈದಿಗಳು ತನಗೆ ಥಳಿಸಿದರು ಎಂದು ಈಶಾನ್ಯ ದಿಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಬಾಹಿರ (ನಿಯಂತ್ರಣ)ಕಾಯ್ದೆ ಅಡಿಯಲ್ಲಿ ಬಂಧಿತರಾಗಿರುವ ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್ ದಿಲ್ಲಿ ನ್ಯಾಯಾಲಯದ ಮುಂದೆ ಮಂಗಳವಾರ ಹೇಳಿದ್ದಾರೆ.

ಜಹಾನ್ ಅವರ ಭದ್ರತೆಗೆ ಹಾಗೂ ಅವರ ಮೇಲೆ ಕಿರುಕುಳ ನಡೆಯದಂತೆ ಕೂಡಲೇ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೆಚ್ಚುವರಿ ನ್ಯಾಯಾಧೀಶ ಅಮಿತಾಬ್ ರಾವತ್ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಈ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಬುಧವಾರ ವಿಸ್ತೃತ ವರದಿ ಸಲ್ಲಿಸುವಂತೆ ನ್ಯಾಯಾಲಯ ಕಾರಾಗೃಹದ ಅಧಿಕಾರಿಗಳಿಗೆ ಸೂಚಿಸಿದೆ. ಒಂದು ವೇಳೆ ಈ ಸಮಸ್ಯೆಗಳನ್ನು ಪರಿಹರಿಸದೇ ಇದ್ದರೆ, ಅವರನ್ನು ಇನ್ನೊಂದು ಕಾರಾಗೃಹಕ್ಕೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ. ‘‘ಅವರು (ಜಹಾನ್) ಭಯಭೀತರಾದಂತೆ ಕಾಣುತ್ತಿದೆ. ದಯವಿಟ್ಟು ಕೂಡಲೇ ಅವರೊಂದಿಗೆ ಮಾತನಾಡಿ ಹಾಗೂ ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಅವರ ಆತಂಕ ಹಾಗೂ ಭಯ ನಿವಾರಿಸಲು ತೆಗೆದುಕೊಂಡ ಕ್ರಮಗಳ ಬಗೆಗಿನ ವಿಸ್ತೃತ ವರದಿ ಸಲ್ಲಿಸಿ’’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News