ಒಡೆದು ಆಳುವ ನೀತಿ

Update: 2020-12-29 17:47 GMT

ಮಾನ್ಯರೆ,

ಪ್ರಾಧಿಕಾರ/ನಿಗಮಗಳು ರಚನೆಯಾಗಲು ‘ತೆರಿಗೆದಾರರ ರೊಕ್ಕ’ದಿಂದ ಮಾತ್ರ ಸಾಧ್ಯ ಎಂಬುದನ್ನು ಮರೆಯಬಾರದು. ನಮ್ಮ ರಾಜ್ಯದಲ್ಲಿ ಪಶ್ಚಿಮ ಬಂಗಾಳ, ತಮಿಳು ಜನ, ಆಂಧ್ರದವರು, ಕೇರಳೀಯರು, ಪಂಜಾಬಿ, ಸಿಂಧಿ, ರಾಜಾಸ್ಥಾನಿ, ಗುಜರಾತಿ, ಗೂರ್ಖ ಮತ್ತಿತರ ಮಂದಿ ಇದ್ದಾರೆ. ಈ ಪ್ರತಿಯೊಂದು ಗುಂಪಿನ ಮಂದಿಗೂ ಪ್ರತ್ಯೇಕ ಪ್ರಾಧಿಕಾರ ಸೃಷ್ಟಿಸುತ್ತಾ ಸಾಗಿದಲ್ಲಿ ಉಳಿದ ಜನತೆಯ ಅಭಿವೃದ್ಧಿಗೆ ಏನಾದರೂ ಹಣವು ಮಿಕ್ಕಿರುವುದೇ ಎಂದು ರಾಜ್ಯದ ಜನ ಗಂಭೀರವಾಗಿ ಆಲೋಚನೆ ಮಾಡಬೇಕು. ನಮ್ಮ ದೇಶವನ್ನು ಈ ಹಿಂದೆ ಆಳಿದ ಬ್ರಿಟಿಷರು ಹಿಡಿದ ಆಯುಧ ಒಡೆದು ಆಳುವ ನೀತಿ ತಾನೇ? ಈಗ ರಾಜ್ಯವನ್ನು ಆಳುವ ಮಂದಿಯೂ ಅದೇ ಹೀನ ಆಯುಧವನ್ನು ‘ಅಭಿವೃದ್ಧಿ’ಯ ಹೆಸರಿನಲ್ಲಿ ಹಿಡಿದಿರುವಂತೆ ತೋರುತ್ತಿದೆ. ಒಮ್ಮೆ ವ್ಯಕ್ತಿಯೊಬ್ಬ ಈ ರಾಜ್ಯದಲ್ಲಿ ಬಾಳ್ವೆ ನಡೆಸುತ್ತಿರುವನೆಂದ ಮೇಲೆ, ಅವನು ಕನ್ನಡಿಗನೇ. ಮುಖ್ಯವಾಹಿನಿಯಲ್ಲಿ ಲೀನವಾದ ಬಳಿಕ ನದಿ ಟಿಸಿಲೊಡೆಯಲು ಅವಕಾಶವಿಲ್ಲ.

Similar News